ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಪ್ಪು ಕುರ್ತಾದಲ್ಲಿ ಖರ್ಗೆ : ಕಾಂಗ್ರೆಸ್ ನಾಯಕರೇ ಗಲಿಬಿಲಿ

ನವದೆಹಲಿ : ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಾಗಿರೋದನ್ನ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಕಪ್ಪು ಬಣ್ಣದ ಕುರ್ತಾ ಮತ್ತು ಟರ್ಬನ್ ಧರಿಸಿದ್ದಾರೆ. ಕಾಲಿಗೆ ಹಾಕಿರುವ ಶೂ ಕೂಡ ಕಪ್ಪುಬಣ್ಣದಾಗಿದೆ.

ಇನ್ನು ಇಂದು ಖರ್ಗೆಯನ್ನ ನೋಡಿದ ಕಾಂಗ್ರೆಸ್ ನಾಯಕರೂ ಕೂಡ ಗಾಬರಿ ಮತ್ತು ಗಲಿಬಿಲಿಯಾಗುವಂತೆ ಕಂಡಿದ್ದಾರೆ.

ಇನ್ನೊಂದು ವಿಚಾರ ಅಂದರೆ ಮಲ್ಲಿಕಾರ್ಜುನ್ ಖರ್ಗೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಿಸಿ ತಟ್ಟಿದೆ. ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ಬರೋಬ್ಬರಿ 7 ಗಂಟೆಗಳ ಕಾಲ ಇಡಿ ವಿಚಾರಣೆಯನ್ನ ಎದುರಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಖರ್ಗೆ ಇವತ್ತು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Edited By : Nirmala Aralikatti
PublicNext

PublicNext

05/08/2022 02:57 pm

Cinque Terre

49.65 K

Cinque Terre

19

ಸಂಬಂಧಿತ ಸುದ್ದಿ