ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ಕುರುಡುಗಾನ ಹಳ್ಳಿಯ ವೃದ್ಧೆ ಲಕ್ಷ್ಮಮ್ಮ ತನ್ನ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಹಳ್ಳವೊಂದರಲ್ಲಿ ಕೊಚ್ಚಿಹೋಗಿದ್ದರು. ಬಳಿಕ ಶವವಾಗಿ ಪತ್ತೆಯಾದ್ದರು. ಈ ವೃದ್ಧೆಯ ಅಂತಿಮ ದರ್ಶನ ಪಡೆದ ಮಾಜಿ ಉಪಮುಖ್ಯ ಮಂತ್ರಿ ಮತ್ತು ಹಾಲಿ ಶಾಸಕರಾದ ಡಾ.ಜಿ. ಪರಮೇಶ್ವರ್ ಜಿ. ಪರಿಹಾರ ವಿತರಿಸಿದ್ದಾರೆ.
ಹೌದು ಗುರುವಾರ ರಾತ್ರಿ ಆಸ್ಪತ್ರೆಗೆ ಭೇಟಿ, ವಯೋವೃದ್ಧೆಯ ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಜಿ. ಪರಮೇಶ್ವರ್ ಜಿ, ಅಜ್ಜಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಹಿದಾ ಜಂ ಜಂ, ಸಿಪಿಐ ಸಿದ್ದರಾಮೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಶಂಕರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾರಪ್ಪ,ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರುಗಳು ಇದ್ದರು.
PublicNext
04/08/2022 10:57 pm