ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನ ಆಚರಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಬಿಜೆಪಿಯ ಹಿರಿಯ ನಾಯಕ,ಲಿಂಗಾಯತ ಮುಖಂಡ ಜನ್ಮದಿನ ಆಚರಿಸಿಕೊಳ್ಳಲು ಸಿದ್ದತೆ ನಡೆಸಿದ್ದಾರೆ.
ಹೌದು.ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಡಾ.ಪ್ರಭಾಕರ್ ಕೋರೆ 75 ಜನ್ಮದಿನದ ಆಚರಣೆಗೆ ಇವರ ಅಭಿಮಾನಿಗಳು ಈಗ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ರಾಜ್ಯಸಭಾ ಸದಸ್ಯರಾಗಿರೋ ಡಾ.ಪ್ರಭಾಕರ್ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷರಾದ ಬಳಿಕ ಕೆಎಲ್‌ಇ ಸಂಸ್ಥೆಯನ್ನು ಮುನ್ನಡೆಸಿಕೊಂಡು ದೇಶ ವಿದೇಶದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
PublicNext
04/08/2022 10:48 pm