ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮೂಲಕ ನಿವೃತ್ತಿ ತೆಗೆದುಕೊಳ್ಳಲಿ. ಒಂದು ಕಾಲದಲ್ಲಿ ಕಾಂಗ್ರೆಸ್ ಇತ್ತು ಎಂದು ಮ್ಯೂಸಿಯಂನಲ್ಲಿ ನೋಡುವ ಕಾಲ ಹತ್ತಿರ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ಸಚಿವ ಡಾ.ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ.ಅಶ್ವತ್ಥನಾರಾಯಣ ಆರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಮಹಾಪುರುಷರ ಕಾರ್ಯಕ್ರಮ ಆಗುತ್ತಿದೆ. ಏನು ಕೊಡುಗೆ ಕೊಟ್ಟಿದ್ದಾರೆ ಅಂತಾ ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೆ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ಇದೆ, ಹೀಗಾಗಿ ಮಾಡಿಕೊಳ್ಳಲಿ. 75ನೇ ವರ್ಷದ ಶುಭ ಸಂದರ್ಭದಲ್ಲಿ ಜನರ ವಿಶ್ವಾಸ ಪಡೆದುಕೊಳ್ಳಲು ಶಕ್ತಿ ಪ್ರದರ್ಶನ ಮಾಡುವುದರಲ್ಲಿ ತಪ್ಪೇನಿಲ್ಲ. ಹಿಂದೆ ಸಿಎಂ ಆಗಿದ್ದಾರೆ, ಇನ್ಮುಂದೆ ಆಗೋದಿಲ್ಲ. ಈಗ 75 ವರ್ಷ ಆಗಿದೆ. ಇನ್ನೇನಿದೆ, ನಿವೃತ್ತಿ ಘೋಷಣೆ ಮಾಡಲಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ. ಒಂದು ಕಾಲದಲ್ಲಿ ಕಾಂಗ್ರೆಸ್ ಇತ್ತು ಎಂದು ಮ್ಯೂಸಿಯಂನಲ್ಲಿ ನೋಡುವ ಕಾಲ ಹತ್ತಿರ ಬಂದಿದೆ. ಯಾವ ವಿಚಾರ, ತತ್ವ, ಮೌಲ್ಯದಲ್ಲಿ ಇವರು ಒಂದಾಗುತ್ತಾರೆ. ಎಲ್ಲಾರು ನಾನು ನಾನು ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಈಗಿನ ಕಾಲಕ್ಕೆ ಸಂಪೂರ್ಣವಾಗಿ ಇವರು ಅಪ್ರಸ್ತುತ. ಕೈ ನಾಯಕರು ನೂರಕ್ಕೆ ನೂರು ನಿವೃತ್ತಿ ತೆಗೆದುಕೊಂಡು ಆಶೀರ್ವಾದ ಮಾಡಿಕೊಂಡು ಇರಬೇಕು. ಏನೋ ಐದು ವರ್ಷ ಮಾಡಿದರು, ಇನ್ನು ಬಾರ ಹೊತ್ತುಕೊಳ್ಳಲಿ ಎಂದರೇ ಹೇಗೆ..? ಇವರೆಲ್ಲಾ ಔಟ್‍ಡೆಟೆಡ್ ಮಾಡೆಲ್‌ಗಳು ಎಂದು ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದರು.
PublicNext
03/08/2022 10:40 pm