ನವದೆಹಲಿ: ತೃಣ ಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಹಿತ್ರಾ ಅವ್ರ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಸೋಮುವಾರ ಲೋಕಸಭೆಯಲ್ಲಿ ನಡೆದ ಘಟನೆಯನ್ನೇ ಈ ಒಂದು ವೀಡಿಯೋದಲ್ಲಿ ಕಾಣಬಹುದು.
ಲೋಕಸಭೆಯ ಈ ಒಂದು ಘಟನೆ ನಿಜಕ್ಕೂ ವಿಡಂಬನಾತ್ಮಕವಾಗಿಯೇ ಇದೆ. ಹೌದು. ತೃಣ ಮೂಲ ಕಾಂಗ್ರೆಸ್ ಪಕ್ಷದ ಕಾಕೋಲಿ ಘೋಷ್ ದಸ್ತಿದಾರ್ ಅವ್ರು ಲೋಕಸಭೆಯಲ್ಲಿ ಹಣದುಬ್ಬರದ ಚರ್ಚೆಯಲ್ಲಿ ಧ್ವನಿ ಎತ್ತಿದರು. ಆಗ ಪಕ್ಕದಲ್ಲಿಯೇ ಕುಳಿತ ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ತಮ್ಮ 1.5 ಲಕ್ಷ ಬೆಲೆ ಬಾಳೋ ಲೂಯಿ ವಿಟಾನ್ ಬ್ಯಾಗ್ ಅನ್ನ ಆ ಕೂಡಲೇ ಕಾಲಡಿ ಬಚ್ಚಿಟ್ಟರು.
ಲೋಕಸಭಯ ಈ ಒಂದು ದೃಶ್ಯವೇ ಹೆಚ್ಚು ಗಮನ ಸೆಳೆಯುತ್ತಿದೆ. ಚರ್ಚೆ ಕೂಡ ಆಗುತ್ತಿದೆ. ಹಣದುಬ್ಬರದ ಬಗ್ಗೆ ಮಾತನಾಡೋ ಟಿಎಂಸಿ ಸಂಸದರ ಬಳಿ 1.5 ಲಕ್ಷ ಬ್ಯಾಗ್ ಇದೆ. ಇವರು ಹಣದುಬ್ಬರದ ಬಗ್ಗೆ ಧ್ವನಿ ಎತ್ತುತ್ತಾರೆ ಅನ್ನೋ ಹಾಗೇನೆ ಇದೆ ಈ ವೀಡಿಯೋ.ಅಷ್ಟೇ ವೈರಲ್ ಕೂಡ ಆಗುತ್ತಿದೆ.
PublicNext
02/08/2022 06:27 pm