ವರದಿ- ಈರನಗೌಡ ಪಾಟೀಲ
ಹಾವೇರಿ: ನಗರದಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಇಂದು ಸುದ್ದಿಗೋಷ್ಟಿ ನಡೆಸಿದರು, ಈ ವೇಳೆ ಮಾತನಾಡಿದ ಅವರು ನಮ್ಮ ಕಾಂಗ್ರೆಸ್ ನ 500 ಜನರ ತಂಡದವರು ಆಂತರಿಕ ಸಮೀಕ್ಷೆ ಮಾಡಿದ್ದಾರೆ ಆಂತರಿಕ ಸಮೀಕ್ಷೆ ಪ್ರಕಾರ 130 ಸೀಟು ಕಾಂಗ್ರೆಸ್ ಗೆಲ್ಲುತ್ತೆ 150 ಸೀಟ್ ಗೆಲ್ಲುವ ಗುರಿ ರಾಹುಲ್ ಗಾಂಧಿ ಕೊಟ್ಟಿದ್ದಾರೆ.
ಜನ ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು ಜನ ಬಯಸುತ್ತಿದ್ದಾರೆ ಎಂದರು, ಈ ಸರ್ಕಾರದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸೇರಿ ಎಲ್ಲಾ ವಿಚಾರದಲ್ಲೂ ಜನ ಬೇಸತ್ತಿದ್ದಾರೆ. ಪುತ್ತೂರು ಹಾಗೂ ಸುರತ್ಕಲ್ ಘಟನೆಗಳಿಂದ ಜನ ದಿಗ್ಭ್ರಾಂತರಾಗಿದ್ದಾರೆ ಈ ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯಾ? ಎಲ್ಲಾ ಘಟನೆಗಳಿಗೆ ನೇರ ಹೊಣೆ ರಾಜ್ಯ ಸರ್ಕಾರ ಇವರ ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ ಪುತ್ತೂರು ಹಾಗೂ ಸುರತ್ಕಲ್ ನಲ್ಲಿ ಒಟ್ಟು ಎರಡು ಕೊಲೆಯಾಗಿದೆ ಮಸೂದ್, ಪ್ರವೀಣ್, ಮಹಮದ್ ಫಾಸಿಲ್ ಕೊಲೆಗಳಾಗಿವೆ ಮುಖ್ಯಮಂತ್ರಿಗಳೇ ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದೀರಿ ಎಲ್ಲಾ ಜನರಿಗೆ ಸಹಕಾರ, ರಕ್ಷಣೆ ಕೊಡ್ತೀನಿ ಅಂತ ಪ್ರಮಾಣ ಮಾಡಿದ್ದೀರಿ ಆದರೆ ಒಬ್ರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡ್ತೀರಾ ಆದರೆ ಉಳಿದ ಇಬ್ಬರು ಹತ್ಯೆಯಾದ ಯುವಕರ ಮನೆಗಳಿಗೆ ಹೋಗಿಲ್ಲ, ಪರಿಹಾರ ಕೊಟ್ಟಿಲ್ಲ
ತಮ್ಮ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದೀರಿ ಪ್ರವೀಣ್ ಹತ್ಯೆ ಕೇಸ್ 'ಎನ್ಐಎ'ಗೆ ಕೊಡ್ತೀರಿ ನಮ್ಮ ಪೊಲೀಸರಿಗೆ ಈ ಪ್ರಕರಣ ಬೇಧಿಸೋ ಶಕ್ತಿ ಇಲ್ಲವಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
PublicNext
02/08/2022 04:48 pm