ಬೆಂಗಳೂರು: ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಡಬೇಕಾದ ಭಾಷಣ ಕಾರ್ಯಕ್ರಮಕ್ಕೂ ಎರಡು ದಿನಗಳ ಮೊದಲೇ ಬಹಿರಂಗವಾಗಿದೆ.
ಭಾಷಣದ ತುಣುಕನ್ನು ಕಾಂಗ್ರೆಸ್ ವಾಟ್ಸಾಪ್ ಗ್ರೂಪ್ನಲ್ಲಿ ಹರಿಬಿಡಲಾಗಿದ್ದು, ಬಳಿಕ ಕೂಡಲೇ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮಾಡಬೇಕಾದ ಭಾಷಣದ ತುಣುಕು ಸದ್ಯ ವೈರಲ್ ಆಗಿದೆ.
ಇನ್ನು ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.
PublicNext
02/08/2022 03:08 pm