ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಯಡಿಯೂರಪ್ಪರನ್ನು ಯಾರೂ ಸೈಡ್ಲೈನ್ ಮಾಡ್ಲಿಕ್ಕೆ ಆಗಲ್ಲ; ಮಾಧುಸ್ವಾಮಿ

ದಾವಣಗೆರೆ: ಮಾಜಿ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಯಾರೂ ಸೈಡ್ ಲೈನ್‌ ಮಾಡಲಿಕ್ಕೆ ಆಗಲ್ಲ. ಈ ಪ್ರಶ್ನೆಯೇ ಉದ್ಭವಿಸದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಯಾರೂ ಮೀರಿಸೋಕೆ ಆಗಲ್ಲ. ಜನೋತ್ಸವ ಕಾರ್ಯಕ್ರಮ ಮಾಡಲು ಐಡಿಯಾ ಕೊಟ್ಟಿದ್ದೇ ಯಡಿಯೂರಪ್ಪ. ರಾಜ್ಯದ ನಾಲ್ಕು ಕಡೆಗಳಲ್ಲಿ ಕಾರ್ಯಕ್ರಮ ಮಾಡುವ ಆಸೆ ಇತ್ತು. ಆದರೆ, ಒಂದೇ ಕಡೆ ಸಾಕೆಂದು ನಿರ್ಧರಿಸಲಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಘಟನೆಯಿಂದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆ ತುಂಬಾ ಕೆಟ್ಟದಾಗಿ ನಡೆದಿದೆ. ರಾಜಕೀಯ ಪ್ರೇರಿತ ಹತ್ಯೆಗಳು ಹೆಚ್ಚಾಗುತ್ತಿವೆ. ಇದನ್ನು ಯಾರು ಮಾಡ್ತಿದ್ದಾರೆ, ಏನು ಕಾರಣ ಅನ್ನೋದು ಪತ್ತೆ ಮಾಡೋದಕ್ಕೆ ಸಮಯ ಹಿಡಿಯುತ್ತೆ. ಅರೆಸ್ಟ್ ಆದವನ ತಂದೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂತಾರೆ. ಅವರ ಮಧ್ಯೆ ಒಳ್ಳೇ ಸಂಬಂಧ ಇತ್ತು ಅಂತಾರೆ. ಯಾಕೆ ಹೀಗೆ ಆಗ್ತಾ ಇದೆ, ಯಾರಾದ್ರೂ ಚೇಷ್ಟೆ ಮಾಡ್ತಾ ಇದ್ದಾರೋ ಗೊತ್ತಿಲ್ಲ.‌ ಈ ಕೇಸ್ ಅನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರೂ ಹುಡುಗಾಟ ಆಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

Edited By : Nagesh Gaonkar
PublicNext

PublicNext

30/07/2022 06:58 pm

Cinque Terre

49.9 K

Cinque Terre

0

ಸಂಬಂಧಿತ ಸುದ್ದಿ