ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SSC Scam : ಜೈಲಿಗೆ ಹೋಗ್ತಾರಾ ದೀದಿ?

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಎಬ್ಬಿಸಿದ ಎಸ್ ಎಸ್ ಸಿ ಹಗರಣದ ಬಯಲಾಗಿದ್ದು, ದೀದಿ ತಲೆತಗ್ಗಿಸುವಂತಾಗಿದೆ. ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಅವರ ಎರಡು ಫ್ಲಾಟ್ ನಿಂದ ಸುಮಾರು 50 ಕೋಟಿಗೂ ಹೆಚ್ಚು ನಗದು, 5 ಕೆಜಿಯಷ್ಟು ಚಿನ್ನ ಸೀಝ್ ಮಾಡಲಾಗಿದೆ.

ಇದು ಟಿಎಂಸಿ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಅಸ್ತ್ರವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಒಂದು ವೈರಲ್ ಆಗಿದೆ.ಸದ್ಯ ಜಾರಿ ನಿರ್ದೇಶನಾಲಯದ ರೈಡ್ ಮಾಡಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಬಂಧನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧಂಖರ್ ಅವರ ವೀಡಿಯೊವನ್ನು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ. ಅಲ್ಲಿ ಅವರು ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಇದಕ್ಕಿಂತ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಹೇಳಿದ್ದಾರೆ.

ಅಮಿತ್ ಮಾಳವಿಯಾ ವಿಡಿಯೋ ಪೋಸ್ಟ್ ಮಾಡಿ, ಎಸ್ ಎಸ್ ಸಿ ಹಗರಣದ ಸೂಕ್ಷ್ಮ ವಿವರಗಳನ್ನು ತಿಳಿದಿರುವ ಮಾಜಿ ಪಶ್ಚಿಮ ಬಂಗಾಳ ಗವರ್ನರ್, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಮುಖ ಅಂಶವನ್ನು ನೀಡಿದ್ದರು. ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಅವರು ಗಮನಸೆಳೆದರು. ಮಮತಾ ಬ್ಯಾನರ್ಜಿಯವರು ಈ ಬಗ್ಗೆ ಚಿಂತಿಸಬೇಕು ಎಂದು ಅವರು ಹೇಳಿದ್ದಾರೆ.

ಸದ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪಾರ್ಥ ಚಟರ್ಜಿ ಅವರನ್ನು ಎಲ್ಲಾ ಸಚಿವಾಲಯಗಳಿಂದ ವಜಾಗೊಳಿಸಿದ್ದಾರೆ.

Edited By : Nirmala Aralikatti
PublicNext

PublicNext

29/07/2022 05:35 pm

Cinque Terre

30.95 K

Cinque Terre

3

ಸಂಬಂಧಿತ ಸುದ್ದಿ