ನವದೆಹಲಿ: ಮುಂಗಾರು ಅಧಿವೇಶನದಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ. ಆದರೆ, ಇದೇ ಅಧಿವೇಶನದಲ್ಲಿ ಅಸಭ್ಯವಾಗಿ ವರ್ತಿಸಿದಕ್ಕೆ ಸುಮಾರು 24 ವಿಪಕ್ಷದ ಸಂಸದರನ್ನ ಅಮಾನತ್ತುಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಸಂಸತ್ ಭವನದ ಆವರಣದಲ್ಲಿರೋ ಗಾಂಧಿ ಪ್ರತಿಮೆ ಎದುರು ವಿಪಕ್ಷದವ್ರು ಪ್ರತಿಭಟನೆ ಕೂಡ ಮಾಡುತ್ತಿದ್ದಾರೆ.
ಆದರೆ, ಈಗ ಇದೇ ವಿಪಕ್ಷದವರು ಗಾಂಧಿ ಪ್ರತಿಮೆ ಎದುರು ಕುಳಿತು ಚಿಕನ್ ತಂದೂರಿ ತಿಂದು ಅವಮಾನಿಸಿದ್ದಾರೆ ಎಂಬ ಹೊಸ ವಿವಾದ ಈಗ ಭುಗಿಲೆದ್ದಿದೆ. ಈ ವಿಚಾರವಾಗಿಯೇ ಬಿಜೆಪಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ.
ಹೀಗಿರೋವಾಗ, ವಿಪಕ್ಷಗಳ ಪರವಾಗಿ ಟಿಎಂಸಿ ಸಂಸದರು ಬೆಂಬಲಕ್ಕೆ ನಿಂತಿದ್ದು, ಈ ಆರೋಪ ಸುಳ್ಳೆ ಸುಳ್ಳು ಅಂತಲೇ ಹೇಳಿದೆ.
PublicNext
29/07/2022 07:34 am