ಮಂಗಳೂರು: ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿರೋದು ಸ್ವಾಗತಾರ್ಹ. ಆದರೆ, ಅದೇ ರೀತಿ ನೋವಿನಲ್ಲಿರೊ ಮಸೂದ್ ಕುಟುಂಬವನ್ನ ಭೇಟಿಯಾಗಿದ್ದರೆ, ಈ ಒಂದು ಕುಟುಂಬಕ್ಕೂ ಧೈರ್ಯ ಸಿಕ್ಕಂತಾಗುತ್ತಿತ್ತು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ನೋವಿನ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾರತಮ್ಯ ಮಾಡಿರೋದು ಸರಿ ಅಲ್ಲವೇ ಅಲ್ಲ.ಹಾಗಂತ ಇದರಿಂದ ಮಸೂದ್ ಕುಟುಂಬಕ್ಕೆ ನಷ್ಟವೇನೂ ಇಲ್ಲ. ಈ ವರ್ತನೆಗೆ ಮುಖ್ಯಮಂತ್ರಿ ಗಾದಿಗೆ ಧಕ್ಕೆ ಉಂಟಾಗುತ್ತದೆ ಎಂದು ಯು.ಟ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
29/07/2022 07:12 am