ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಡಿಸೆಂಬರ್ ಒಳಗಾಗಿ ಬಸವೇಶ್ವರ ಏತ ನೀರಾವರಿ ಪೂರ್ಣ

ಅಥಣಿ: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇದೇ ವರ್ಷದ ಡಿಸೆಂಬರ ಅಂತ್ಯದೊಳಗಾಗಿ ಪೂರ್ಣಗೊಳ್ಳುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನನಗೆ ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ಅಥಣಿಯ ನೀರಾವರಿ ಇಲಾಖೆಯಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪ್ರಗತಿ ಕುರಿತು ಅಧಿಕಾರಿ ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಮಾತನಾಡುತ್ತಾ ಕೊರೊನಾ ಸಂದರ್ಭದ ಎರಡು ವರ್ಷದಲ್ಲಿ ಈ ಯೋಜನೆಗೆ ಹಣ ಬಿಡುಗಡೆ ವಿಳಂಬವಾಯಿತು ಹೀಗಾಗಿ ಈ ಯೋಜನೆಗೆ ಸ್ವಲ್ಪ ಹಿನ್ನಡೆಯಾಗಿದೆ ಆದರೆ ಇತ್ತೀಚಿಗೆ ಈ ಯೋಜನೆ ಸಂಬಂಧ ಅನೇಕ ಬಾರಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿ ಮಾಡಿ ಯೋಜನೆ ವಿಳಂಬ ಕುರಿತು ಚರ್ಚಿಸಿದ ಪರಿಣಾಮ ಬೊಮ್ಮಾಯಿ ಈ ಯೋಜನೆಯ ಪೂರ್ಣಗೊಳ್ಳಲು ಬೇಕಾದ ಅನುದಾನ ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದ್ದಲ್ಲದೆ ಯೋಜನೆಯ ಪ್ರಗತಿಯ ಕುರಿತು ಆಗಾಗ ಮಾಹಿತಿ ಕೂಡ ನೀಡಬೇಕು ಎಂದು ನನಗೆ ಸೂಚಿಸಿದ್ದಾರೆ.

ಈ ಯೋಜನೆ ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳ್ಳುತ್ತದೆ. ಇದರಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕ್ಷಕ ಅಭಿಯಂತರ ಬಿ.ಆರ್ ರಾಠೋಡ್, ಅಧಿಕಾರಿಗಳಾದ ಎಸ್.ಜಿ ಶ್ರೀನಾಥ, ಕೆ.ರವಿ, ಪ್ರವೀಣ ಹುಣಶಿಕಟ್ಟಿ, ಪ್ರಶಾಂತ ಪೊದ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Shivu K
PublicNext

PublicNext

28/07/2022 09:46 am

Cinque Terre

73.13 K

Cinque Terre

0

ಸಂಬಂಧಿತ ಸುದ್ದಿ