ಶಿವಮೊಗ್ಗ: ಸುಳ್ಯದಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಬರ್ಬರ ಹತ್ಯೆ ಖಂಡನೀಯ. ರಾಜ್ಯದ ಸಿಎಂ ಹಾಗೂ ಗೃಹ ಮಂತ್ರಿಗಳು ಕೊಲೆಪಾತಕಿಗಳನ್ನು ಬಿಡೋದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ತಪ್ಪು ಮಾಡದ ಹಿಂದುತ್ವವಾದಿ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲವು ಮುಸಲ್ಮಾನ ಗೊಂಡಾಗಳು ಕಗ್ಗೊಲೆ, ಹಲ್ಲೆ ಮಾಡುತ್ತಿದ್ದಾರೆ. ಒಂಟಿಯಾಗಿರುವ ವೇಳೆ ಕೊಲೆ ಮಾಡುತ್ತಿರುವ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಪ್ರವೀಣ್ ಅವರ ಕೊಲೆ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ. ಕೊಲೆಗಡುಕರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಕೊಲೆಮಾಡುವ ಮುಸ್ಲಿಂ ಗೂಂಡಾಗಳು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಹಾಗೂ ಹಿಂದೂ ಸಮಾಜ ಬಲಹೀನವೆಂದು ಯಾರು ಅಂದುಕೊಳ್ಳುವುದು ಬೇಡ. ಇದು ಹಿಂದೂತ್ವವಾದಿಗಳ ದೌರ್ಬಲ್ಯವೂ ಅಲ್ಲ. ಕಾನೂನಿಗೆ ಗೌರವ ಕೊಟ್ಟು, ಶಾಂತಿ ಸುವ್ಯವಸ್ಥೆ ಕಾಪಾಡಲೂ ಎಲ್ಲರೂ ಸುಮ್ಮನಿದ್ದಾರೆ. ನಾನು ಕೂಡ ನಾಳೆ ಸಿಎಂ ಭೇಟಿಯಾಗಿ, ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುವೆ ಎಂದು ತಿಳಿಸಿದರು.
PublicNext
27/07/2022 05:09 pm