ನವದೆಹಲಿ: ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಹಾಗೂ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ಪ್ರತಿಪಕ್ಷಗಳ 19 ಮಂದಿ ಸಂಸದರನ್ನು ಈ ವಾರದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.
ಯಾರೆಲ್ಲಾ ಅಮಾನತು..?
ಸುಶ್ಮಿತಾ ದೇವ್ (ಎಐಟಿಸಿ), ಮೌಸಂ ನೂರ್ (ಎಐಟಿಸಿ), ದೋಲಾ ಸೇನ್ (ಎಐಟಿಸಿ), ಸಂತನು ಸೇನ್ (ಎಐಟಿಸಿ), ಅಭಿ ರಂಜನ್ ಬಿಸ್ವರ್ (ಎಐಟಿಸಿ), Md ನದಿಮ್ ಉಲ್ ಹಕ್ (ಎಐಟಿಸಿ), ಎಂ. ಹಮಮೆದ್ ಅಬ್ದುಲ್ಲ (ಡಿಎಂಕೆ), ಬಿ.ಲಿಂಗಯ್ಯ ಯಾದವ್ (ಟಿಆರ್ಎಸ್), ಎ.ಎ. ರಹೀಮ್, ಸಿಪಿಐ (ಎಂ), ರವಿಂಹಂದ್ರ ವಾದಿರಾಜು (ಟಿಆರ್ಎಸ್), ಎಸ್.ಕಲ್ಯಾನಸುಂದ್ರಂ (ಡಿಎಂಕೆ), ಆರ್.ಗಿರಿರಂಜನ್ (ಡಿಎಂಕೆ), ಎನ್.ಆರ್. ಎಲಂಗೋ (ಡಿಎಂಕೆ), ಡಾ. ವಿ. ಸಿವದಸನ್, ಸಿಪಿಐ (ಎಂ), ಎಂ.ಶಣಮುಗಂ (ಡಿಎಂಕೆ), ದಾಮೋದರ್ ರಾವ್ ದಿವಕೊಂಡ (ಟಿಆರ್ಎಸ್), ಸಂತೋಷ್ ಕುಮಾರ್ ಪಿ. (ಸಿಪಿಐ), ಡಾ.ಕನಿಮೋಳಿ ಎನ್ವಿಎನ್ ಸೋಮು (ಡಿಎಂಕೆ).
ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದನ್ನು ಮತ್ತು ಬೆಲೆ ಏರಿಕೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಊಟದ ವಿರಾಮಕ್ಕೂ ಮುನ್ನ ರಾಜ್ಯಸಭೆ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು. ಸಭಾಧ್ಯಕ್ಷರ ಎಚ್ಚರಿಕೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದರು. ಈ ವೇಳೆ ಸಭೆಯ ನಡವಳಿಕೆ ವಿರುದ್ಧ ನಡೆದುಕೊಂಡಿರೋದಕ್ಕೆ ಡೆಪ್ಯೂಟಿ ಚೇರ್ಮನ್ ಅಮಾನತು ಮಾಡಿ ಆದೇಶ ನೀಡಿದ್ದಾರೆ.
PublicNext
26/07/2022 05:00 pm