ಕೋಲ್ಕತ್ತ: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಬ್ಯಾನರ್ಜಿ ಅವರನ್ನು ಬಂಧಿಸಿದ್ದಾರೆ. ಆದ್ರೆ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಭುವನೇಶ್ವರಕ್ಕೆ ಕರೆದೊಯ್ದಿದ್ದು ಯಾಕೆ? ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಮೇಲೆ ಟೀಕಾ ಪ್ರಹಾರ ನಡೆಸಿರುವ ಮಮತಾ, ಮಹಾರಾಷ್ಟ್ರದ ನಂತರ ಬಂಗಾಳವನ್ನು ನೀವು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಯಸುತ್ತಿದ್ದೀರಿ. ಸಚಿವ ಪಾರ್ಥ ಅವರನ್ನು ಕೇಂದ್ರ ಸರಕಾರದ ಹಿಡಿತ ಇರುವ ಭುವನೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರ ಉದ್ದೇಶವೇನು? ಇದು ಬಂಗಾಳಕ್ಕೆ ಮಾಡಿದ ಅಪಮಾನ. ಕೇಂದ್ರದವರು ರಾಜ್ಯಗಳನ್ನೆಲ್ಲ ಕಳ್ಳರು ಎಂದು ತಿಳಿದಿದ್ದೀರಾ? ರಾಜ್ಯಗಳು ಇರುವುದರಿಂದಲೇ ನೀವು ಅಲ್ಲಿರುವುದು ಎಂದು ಮಮತಾ ಆಕ್ರೋಶಿತರಾಗಿದ್ದಾರೆ.
ಮಹಾರಾಷ್ಟ್ರ ಬಳಿಕ ಛತ್ತೀಸ್‌ಗಡ ಹಾಗೂ ಪಶ್ಚಿಮ ಬಂಗಾಳ, ಝಾರ್ಖಂಡ್ ಎಂದು ಎಂದು ಬಿಜೆಪಿ ಹೇಳಿದೆ. ಆದರೆ ಇಲ್ಲಿಯವರೆಗೂ ಬರೋದು ಅಷ್ಟು ಸುಲಭ ಸಾಧ್ಯವಲ್ಲ. ಯಾಕಂದ್ರೆ ನಡುವೆ ನೀವು ಬಂಗಾಳ ಕೊಲ್ಲಿಯನ್ನು ದಾಟಬೇಕಿದೆ. ಬರುವಾಗ ಅಲ್ಲಿನ ಮೊಸಳೆಗಳು ನಿಮ್ಮನ್ನು ಕಚ್ಚಿ ಹಾಕುತ್ತವೆ. ಜತೆಗೆ ಉತ್ತರ ಬಂಗಾಳದ ಆನೆಗಳು ನಿಮ್ಮ ಮೇಲೆ ಉರುಳುತ್ತವೆ ಎಂದು ಮಮತಾ ಎಚ್ಚರಿಸಿದ್ದಾರೆ.
PublicNext
26/07/2022 01:17 pm