ರಾಯ್ಪುರ್: ಹೈಟೆಕ್ ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಬೆಂಗಳೂರು ಯುವತಿ ಸೇರಿ 11 ಯುವತಿಯರನ್ನು ಬಂಧಿಸಿದ್ದಾರೆ. ಛತ್ತೀಸ್‌ಗಡದ ರಾಯ್ಪುರ್ ನಗರದ ಸ್ಟಾರ್ ಹೊಟೇಲ್ ಒಂದರ ಮೇಲೆ ಈ ದಾಳಿ ನಡೆದಿದೆ. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಮಾಡಿದ್ದಾರೆ.
ಬಂಧಿತರಲ್ಲಿ ಬೆಂಗಳೂರಿನ ಯುವತಿ ಸೇರಿದಂತೆ ದೆಹಲಿ, ಮುಂಬೈ, ನೇಪಾಳ ಹಾಗೂ ಗುಜರಾತ್ ಮೂಲದವರು ಎನ್ನಲಾಗಿದೆ. ಬಂಧಿತ ಯುವತಿಯರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ ಪೊಲೀಸರೇ ದಂಗಾಗಿದ್ದಾರೆ. ಕಾರಣ, ಬಹುತೇಕ ಯುವತಿಯರ ಫೋನ್‌ಗಳಲ್ಲಿ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಸಂಖ್ಯೆಗಳು ಪತ್ತೆಯಾಗಿವೆ. ಹೈ ಪ್ರೊಫೈಲ್ ರಾಜಕಾರಣಿಗಳಿಗೆ ಈ ಯುವತಿಯರು ಕರೆ ಮಾಡಿದ್ದಾರೆ. ಈ ಮೂಲಕ ವೇಶ್ಯಾವಾಟಿಕೆ ದಂಧೆಯಲ್ಲಿರುವ ಯುವತಿಯರೊಂದಿಗೆ ರಾಜಕೀಯ ನಾಯಕರು ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಸದ್ಯ ಇದೆಲ್ಲವೂ ತನಿಖಾ ಹಂತದಲ್ಲಿರುವುದರಿಂದ ರಾಜಕಾರಣಿಗಳ ಹೆಸರು ಬಹಿರಂಗಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
26/07/2022 10:38 am