ಬೆಂಗಳೂರು: ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಜಮೀರ್ ಅಹ್ಮದ್ ಖಾನ್ ಪದೇ ಪದೇ ಹೇಳ್ತಾನೆ ಇದ್ದಾರೆ. ಇದರಿಂದ ಡಿಕೆ ಶಿವಕುಮಾರ್ ಹಾಗೂ ಜಮೀರ್ ಮಧ್ಯೆ ಜಟಾಪಟಿ ಇದ್ದೇ ಇದೆ. ಆದರೂ ಜಮೀರ್ ತಮ್ಮ ಮುಂದಿನ ಸಿಎಂ ಬಗ್ಗೆ ಮಾತನಾಡುತ್ತಲೇ ಇದ್ದಾರೆ.
ಮುಂದಿನ ಸಿಎಂ ಯಾರೂ ಅನ್ನೋದರ ಬಗ್ಗೆ ಮಾತನಾಡಲೇಬೇಡಿ. ಮುಸ್ಕೊಂಡು ಇರಿ ಅಂತಲೇ ಜಮೀರ್ ಅಹ್ಮದ್ ಗೆ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದರು. ಆದರೂ,ಜಮೀರ್ ಮಾತನಾಡುತ್ತೇ ಇದ್ದಾರೆ.
ಆದರೆ, ಈ ವಿಚಾರವಾಗಿಯೇ ಈಗ ಆಲ್ ಇಂಡಿಯಾ ಕಾಂಗ್ರೆಸ್‌ನಿಂದಲೇ ಜಮೀರ್ ಅಹ್ಮದ್ ಗೆ ನೋಟಿಸ್ ಬಂದಿದೆ.ಹೌದು. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೋಟಿಸ್ ನೀಡಿದ್ದಾರೆ.
ಪಕ್ಷದ ಶಿಸ್ತು ಕ್ರಮ ಉಲ್ಲಂಘಿಸಬೇಡಿ. ಮುಂದಿನ ಸಿಎಂ ಯಾರೂ ಅನ್ನೋದನ್ನ ಹೈಕಮಾಂಡ್ ನಿರ್ಧರಿಸಿ ಹೇಳತ್ತದೆ. ಅಲ್ಲಿವರೆಗೂ ಸಿಎಂ ಯಾರೂ ಅನ್ನೋದಕ್ಕೆ ಸಂಬಂಧಿಸಿದಂತೆ ಹೇಳಿಕೆ ಕೊಡಬೇಡಿ.ಹಾಗೇನಾದ್ರೂ ಹೇಳಿಕೆ ಕೊಟ್ಟರೇ, ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
26/07/2022 08:34 am