ವರದಿ- ಈರನಗೌಡ ಪಾಟೀಲ
ಹಾವೇರಿ: ಬೆಳೆವಿಮೆ ಬೆಳೆ ಹಾನಿ ಗೋಲ್ಮಾಲ್ ಖಂಡಿಸಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಪ್ರತಿವರ್ಷ ಸರಿಯಾದ ಸಮಯಕ್ಕೆ ರೈತರು ಸಾಲ ಮಾಡಿ ಬೆಳೆ ವಿಮೆಯನ್ನು ಸರ್ಕಾರಕ್ಕೆ ಕಟ್ಟುತ್ತಾರೆ.
ಬೆಳೆ ಹಾನಿಯಾದರೆ ನಾವು ಕಟ್ಟಿದ ಬೆಳೆವಿಮೆ ಬರುತ್ತದೆ ಅಂದುಕೊಂಡಿದ್ದ ರೈತರಿಗೆ ಸರಕಾರ ಒಂದು ರೂಪಾಯಿ ಬಿಡುಗಡೆ ಮಾಡದೆ ಅನ್ಯಾಯ ಮಾಡುತ್ತಿದೆ ಎಂದು ರೈತ ಮುಖಂಡರು ನಗರದ ಕೆಇಬಿ ಗಣೇಶ್ ದೇವಸ್ಥಾನದಿಂದ ಪ್ರಮುಖ ಬೀದಿಬೀದಿಗಳಲ್ಲಿ ಸಂಚರಿಸುವ ಮೂಲಕ ಪ್ರತಿಭಟನೆ ಮಾಡಿದರು.
ಸಕಾಲಕ್ಕೆ ರೈತರಿಗೆ ಕೃಷಿಗೆ ಅನುಕೂಲವಾಗುವಂತೆ ಬೆಳೆವಿಮೆ ಹಾಕದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಮುಖಂಡರು ಹಾಗೂ ತಾಲೂಕ ಅಧ್ಯಕ್ಷರು ಸುತ್ತಮುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.
PublicNext
26/07/2022 08:02 am