ಬೆಳಗಾವಿ: ಸವದತ್ತಿ ತಾಲೂಕಿನ ಯಕ್ಕುಂಡಿ ವಿರಕ್ತಮಠದ ಶ್ರೀಕುಮಾರೇಶ್ವರ ಸ್ವಾಮೀಜಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವಾದ ಮಾಡಿದರು.
ಚಾಮರಾಜಪೇಟೆ ಶಾಸಕ & ಮಾಜಿ ಸಚಿವರಾದ BZ ಜಮೀರ್ ಅಹ್ಮದ್ ಖಾನ್ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಶ್ರೀಕುಮಾರೇಶ್ವರ ಸ್ವಾಮೀಜಿ ಮಾತನಾಡಿದ ಶ್ರೀಗಳು, ಶಾಸಕ ಜಮೀರ್ ಅಹ್ಮದ್ ಖಾನ್ ಜಾತಿ ಧರ್ಮ ನೋಡದೇ, ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ. ಇವರು ಮತ್ತೊಮ್ಮೆ ಮಂತ್ರಿಗಳಾಗಿ ಮಠಕ್ಕೆ ಬರಬೇಕು. ಅಷ್ಟೇ ಅಲ್ಲ, ಇಂತಹ ಒಳ್ಳೆಯ ಮನಸ್ಸಿನ ಶ್ರೀ ಜಮೀರ್ ರವರು ಮುಂದಿನ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ಆಶೀರ್ವದಿಸಿದರು.
PublicNext
25/07/2022 04:04 pm