ಕುಣಿಗಲ್: ಸ್ವಾತಂತ್ರ್ಯ ಭಾರತದ 75ನೇ ಅಮೃತ ಮಹೋತ್ಸವ ಪ್ರಯುಕ್ತ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲದಿನವಾದ ಇಂದು ಕೊತ್ತಗೆರೆ ಹೋಬಳಿಯ ಗಿಡದಪಾಳ್ಯ ಗ್ರಾಮದಿಂದ ಪ್ರಾರಂಭವಾಗಿ ಕೊತ್ತಗೆರೆಯವರೆಗೂ ನೂರಾರು ಕಾರ್ಯಕರ್ತರ ಪಾದಯಾತ್ರೆ ನಡೆಸಿದರು.
ಶಾಸಕ ಡಾ ರಂಗನಾಥ್ ಮತ್ತು ಸಂಸದ ಡಿ.ಕೆ ಸುರೇಶ್ ಪ್ರತಿಯೊಂದು ಊರಿಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಜನರು ಶಾಸಕ ಮತ್ತು ಸಂಸದರನ್ನು ಸ್ವಾಗತಿಸಿದರು.
ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಂಗನಾಥ್, ನಾನು ಒಬ್ಬ ಶಾಸಕನಾಗಿ ಮಾತ್ರ ಅಲ್ಲ. ನಿಮ್ಮ ಮನೆಮಗನಾಗಿ ಇರುತ್ತೇನೆ. ನಾಳೆಯಿಂದ ಮತ್ತೆ ನಮ್ಮ ಯಾತ್ರೆ ಮುಂದಕ್ಕೆ ಸಾಗಲಿದೆ. ನಿಮ್ಮ ಪ್ರೀತಿ ಇದೇ ರೀತಿ ಮುಂದುವರೆಯುತ್ತಿರಲಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು. ಕುಣಿಗಲ್ ವಿಧಾನಸಭಾ ಕ್ಷೇತ್ರದ ಹಲವು ಕಾಂಗ್ರೆಸ್‌ನ ವಿವಿಧ ಹಂತದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಹಾಲಿ ಮತ್ತು ಮಾಜಿ ಜಿಪಂ ಮತ್ತು ತಾಪಂ ಸದಸ್ಯರುಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
PublicNext
25/07/2022 02:59 pm