ಪಾವಗಡ: ಪಾವಗಡ ನಗರದಲ್ಲಿ ಸೊಳ್ಳೆಗಳ ಕಾಟ, ಡೆಂಗ್ಯೂ ಜ್ವರ, ಚರಂಡಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ಸಿರಾ ರಸ್ತೆಯಲ್ಲಿ ನಾಗರಕಟ್ಟೆ ಬಳಿ ನಡು ರಸ್ತೆಯಲ್ಲಿ ಗುಂಡಿ ಬಿದ್ದು ಸುಮಾರು ದಿನಗಳೇ ಕಳೆದರು ದುರಸ್ಥಿಯಿಲ್ಲ ಹಾಗೂ ಇನ್ನೂ ಹಲವು ಜ್ವಲಂತ ಸಮಸ್ಯೆಗಳಿಂದ ಪಾವಗಡ ಜನರು ನರಳುತ್ತಿದ್ದಾರೆ.
ಆದರೆ ಪಾವಗಡ ಪುರಸಭೆಯ ಸದಸ್ಯರು ಮೋಜು ಮಸ್ತಿನಲ್ಲಿ ತೊಡಗಿದ್ದಾರೆ, ಇದು ಪಾವಗಡ ಪಟ್ಟಣದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದ ಜನರು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಇವರೇನಾ! ಎನ್ನುವ ರೀತಿ ಇವರು ನಡೆದುಕೊಳ್ಳುತ್ತಿದ್ದಾರೆ ಎಂದು ಪಟ್ಟಣವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಖತ್ ವೈರಲ್ ಆಗಿದೆ.
PublicNext
24/07/2022 09:25 pm