ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ಮತ್ತೆ ಮಾತಾಡ್ತೇನೆ, ಈಗ ಬೇಡ"; ಯಡಿಯೂರಪ್ಪ ಮಾತಿನ‌ ಮರ್ಮವೇನು!?

ದಾವಣಗೆರೆ: ಮತ್ತೆ ಮಾತಾಡ್ತೇನೆ... ಈಗ ಬೇಡ. ಇದು ಮಾಜಿ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೊನ್ನಾಳಿ ಪಟ್ಟಣದಲ್ಲಿರುವ ರೇಣುಕಾಚಾರ್ಯ ಮನೆಯಲ್ಲಿ ಆಡಿದ‌ ಮಾತು.

ಬೆಳಿಗ್ಗೆ ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ್ದ ಯಡಿಯೂರಪ್ಪ, ರೇಣುಕಾಚಾರ್ಯ ಜೊತೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ರೇಣುಕಾಚಾರ್ಯ, ಮತ್ತೊಮ್ಮೆ ಚುನಾವಣೆಗೆ ನೀವು ಸ್ಪರ್ಧಿಸಬೇಕು ಎಂಬ ಮನವಿ ಮಾಡಿದರು. ಈಗಾಗಲೇ‌ ಹೇಳಿದ್ದೇನೆ... ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ ಎಂದು. ಈ ನಿಲುವಿನಲ್ಲಿ ಬದಲಾವಣೆ ಇಲ್ಲ‌ ಎಂದು ಸ್ಪಷ್ಟಪಡಿಸಿದರು.

ಆದ್ರೆ, ರೇಣುಕಾಚಾರ್ಯರಿಗೆ ಹೇಳಿದ ಒಂದು ಮಾತು ರಾಜಕೀಯ ಪಡಸಾಲೆಯಲ್ಲಿ ಈಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ‌. "ಆಮೇಲೆ ಮಾತಾಡ್ತೇನೆ'' ಎಂಬ ಮಾತು ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಅಥವಾ ತಮ್ಮ ಆಪ್ತರನ್ನು ಕಡೆಗಣಿಸಿದರೆ ಬೇರೆಯದ್ದೇ ರಣತಂತ್ರ ಹೆಣೆಯಲಿದ್ದಾರಾ ಯಡಿಯೂರಪ್ಪ ಅನ್ನೋ ಗುಸುಗುಸು ಸಹ ಶುರುವಾಗಿದೆ. ಈಗಾಗಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪರ ಈ ಮಾತಿನ ಮರ್ಮವೇನು ಎಂಬ ಪ್ರಶ್ನೆಯೂ ಗರಿಗೆದರಿದೆ.

ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, "ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದು ಬೇಡ. ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ‌ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಆದರೆ, ಅವರ ಆಸೆ ಕೈಗೂಡುವುದಿಲ್ಲ ಎಂದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ 120 ಸೀಟು ಗೆಲ್ಲುವುದಿಲ್ಲ. ಬಿಜೆಪಿ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಮೊಳಗಿಸಲಿದೆ. ಸೂರ್ಯ- ಚಂದ್ರರು ಇರುವುದು ಎಷ್ಟೋ ಸತ್ಯವೋ ಅದೇ ರೀತಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಭ್ರಮೆಯಲ್ಲಿರುವವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

Edited By : Shivu K
PublicNext

PublicNext

23/07/2022 03:50 pm

Cinque Terre

75.31 K

Cinque Terre

3

ಸಂಬಂಧಿತ ಸುದ್ದಿ