ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಪರ್ಸಂಟೇಸ್ ಪಡೆದಿದ್ದು ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ಸವಾಲು

ದಾವಣಗೆರೆ ''ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. 12 ವರ್ಷ ಹಣಕಾಸು ಸಚಿವನಾಗಿದ್ದೆ. ಯಾವಾನಾದ್ರೂ ಹೇಳಲಿ. ಎನ್ಒಸಿ ತೆಗೆದುಕೊಳ್ಳಲು ನನಗೆ ಪರ್ಸಂಟೇಸ್ ಕೊಟ್ಟಿದ್ದೇನೆ ಎಂದು ಹೇಳಿ ಸಾಬೀತುಪಡಿಸಿದರೆ ಅವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು‌.

ನಗರದ ಜಯದೇವ ವೃತ್ತದಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇ.ಡಿ. ವಿಚಾರಣೆ ನೆಪದಲ್ಲಿ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕವು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ, ಮರ್ಯಾದೆ ಏನೂ‌ ಇಲ್ಲ. ಭಂಡರು, ರಾಜ್ಯ ಹಾಳು‌ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಬಿಜೆಪಿ ಸರ್ಕಾರ ಶೇಕಡಾ 40ರಷ್ಟು ಕಮಿಷನ್ ಕೇಳ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದಾರೆ. ಇದುವರೆಗೆ ತನಿಖೆ ನಡೆಸಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ನಲ್ವವತ್ತು ಪರ್ಸಂಟೇಸ್ ಹೊಡೆಯುತ್ತಿರುವವರ ಬಳಿ ದುಡ್ಡಿಲ್ವಾ. ಕೊರೊನಾದಲ್ಲಿ ಲೂಟಿ ಹೊಡೆದವರು ಪಿಎಸ್ಐ ನೇಮಕಾತಿಯಲ್ಲಿ 300 ಜನರಿಂದ ಹಣ ಪಡೆದಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿ ಬಳಿ 80 ಲಕ್ಷ ಪಡೆದಿದ್ದಾರೆ. ಅಮೃತ್ ಪೌಲ್ ಒಬ್ಬರೇ ಹಣ ಪಡೆದಿಲ್ಲ. ಸರ್ಕಾರದ ಸಚಿವರೆಲ್ಲರೂ ಹಣ ತಿಂದವರೇ. ಈ ಹಿನ್ನೆಲೆಯಲ್ಲಿ ಸರಿಯಾಗಿ ವಿಚಾರಣೆ ಮಾಡುತ್ತಿಲ್ಲ. ಎಲ್ಲಿ ಮಂತ್ರಿಗಳ ಹೆಸರು ಹೊರಬರುತ್ತದೆಯೋ ಎಂಬ ಕಾರಣಕ್ಕೆ ಮಂಪರು ಪರೀಕ್ಷೆ ಮಾಡುತ್ತಿಲ್ಲ. ಸತ್ಯ ಹೊರತರಲು ಬಿಜೆಪಿ ಮುಂದಾಗುತ್ತಿಲ್ಲ. ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಹೊಟೇಲ್ ನ ತಿಂಡಿ ತಿನಿಸುಗಳ ದರ ನಿಗಧಿಯಂತೆ ಅಧಿಕಾರಿಗಳ ವರ್ಗಾವಣೆಗೆ ಬೆಲೆ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು.

Edited By :
PublicNext

PublicNext

22/07/2022 06:42 pm

Cinque Terre

73.1 K

Cinque Terre

7

ಸಂಬಂಧಿತ ಸುದ್ದಿ