ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ತಳ್ಳಾಟ, ನೂಕಾಟ: ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು!

ದಾವಣಗೆರೆ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಗರದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಳ್ಳಾಟ, ನೂಕಾಟ ನಡೆಸಿದರು.

ಸಿದ್ದರಾಮಯ್ಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಹಾಗೂ ಅವರ ಜೊತೆ ಕಾಣಿಸಿಕೊಳ್ಳಬೇಕೆಂಬ ಉಮೇದಿನಲ್ಲಿ ಮುಗಿ ಬಿದ್ದರು. ಸಿದ್ದರಾಮಯ್ಯರ ಮೇಲೆ ಹೂವಿನ ಸುರಿಮಳೆ ಸುರಿಸಿದರು.

ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಪಾದಯಾತ್ರೆ ವೇಳೆಯೂ ಇದೇ ವರ್ತನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶಿಸಿದರು. ಇದರಿಂದಾಗಿ ಶಾಸಕ ಜಮೀರ್ ಅಹ್ಮದ್, ಮೊಹಮದ್ ನಲ್ಪಾಡ್, ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಾರ್ಯಕರ್ತರನ್ನು ದೂಡುತ್ತಲೇ ನಡೆದು ಬಂದರು.

ವೇದಿಕೆ ಮೇಲೆ ಹಾಗೂ ಮುಂಭಾಗವೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಸಿದ್ದರಾಮಯ್ಯ ಅವರು ಜಯದೇವ ವೃತ್ತದಲ್ಲಿ ಮಾತನಾಡುವಾಗ ಮುಂದಿನ ಮುಖ್ಯಮಂತ್ರಿ ಹಾಗೂ ಹುಲಿಯಾ ಘೋಷಣೆಗಳು ಮೊಳಗಿದವು. ಈ ವೇಳೆ ಸಿದ್ದರಾಮಯ್ಯ ಅವರೇ ಆಯ್ತು, ಸುಮ್ಮನಿರಿ ಗದರಿದ ಪ್ರಸಂಗವೂ ನಡೆಯಿತು.

Edited By : Shivu K
PublicNext

PublicNext

22/07/2022 06:17 pm

Cinque Terre

33.15 K

Cinque Terre

0