ನವದೆಹಲಿ:ಸದನದಲ್ಲಿ ಸಮಸ್ಯೆಗಳ ಕುರಿತು ಚರ್ಚೆ ಮಾಡೋಕೆ ಅವಕಾಶ ಇದೆ.ಆದರೆ, ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿಯೇ ಚರ್ಚೆಯಿಂದ ಪಲಾನ ಮಾಡ್ತಿದ್ದಾರೆ. ಸದನದ ಸಮಯವನ್ನೂ ಹಾಳು ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸದನದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವ್ರು, ವಿಪಕ್ಷಗಳು ಕಲಾಪಕ್ಕೆ ಅವಕಾಶ ನೀಡ್ತಾಯಿಲ್ಲ. ಈ ಮೂಲಕ ಸಂಸದರ ಸಂಸದೀಯ ಹಕ್ಕುಗಳನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ದೂರಿದರು.
ನಿಜಕ್ಕೂ ಇದು ಉತ್ತಮ ಬೆಳವಣಿಗೆ ಅಲ್ಲೇ ಅಲ್ಲ. ವಿಪಕ್ಷಗಳು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಆದರೆ, ಆ ಕೆಲಸವನ್ನ ಮಾಡದೇ ಇರೋದೇ ಖಂಡನೀಯ ಅಂತಲೂ ಪ್ರಹ್ಲಾದ್ ಜೋಶಿ ಬೇಸರ ವ್ಯಕ್ತಪಡಿಸಿದರು.
PublicNext
22/07/2022 06:08 pm