ಶಿವಮೊಗ್ಗ:ಮಾಜಿ ಸಿಎಂ ಬಿಎಸ್‌ಯಡಿಯೂರಪ್ಪ ಅವರ ಮಹತ್ವದ ಘೋಷಣೆಯನ್ನ ಪುತ್ರಿ ಬಿ.ವೈ.ಅರುಣಾದೇವಿ ಕೂಡ ಸ್ವಾಗತಿಸಿದ್ದಾರೆ.
ಹೌದು.ಶಿಕಾರಿಪುರ ಕ್ಷೇತ್ರವನ್ನ ವಿಜಯೇಂದ್ರನಿಗೆ ಬಿಟ್ಟಿಕೊಟ್ಟಿರೋ ವಿಚಾರ ಹೇಳಿಕೊಂಡಿದ್ದೇ ತಡ, ಬಿ.ಎಸ್.ವೈ ಪುತ್ರಿ ಅರುಣಾದೇವಿ ಕೂಡ ರಿಯಾಕ್ಟ್ ಮಾಡಿದ್ದಾರೆ.
"ನಾನು ನನ್ನ ತಂದೆಯ ನಿರ್ಧಾರವನ್ನ ಆತ್ಮೀಯವಾಗಿಯೇ ಸ್ವಾಗತಿಸುತ್ತೇನೆ. ಶಿಕಾರಿಪುರ ಜನರ ಅಭಿಮಾನ ರಕ್ತದ ಕಣಕಣದಲ್ಲೂ ಇದೆ. ಶಿಕಾರಿಪುರ ತವರೂರು ಅನ್ನೋ ಅಭಿಮಾನ ತಂದೆಗಿದೆ. ಈ ಕಾರಣಕ್ಕೆ ತಮ್ಮ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಸ್ಪರ್ಧಿಸಬೇಕು ಅನ್ನೋ ಆಸೆ ತಂದೆಗಿದೆ ಅಂತಲೇ ಬಿ.ವೈ.ಅರುಣಾದೇವಿ ಹೇಳಿಕೊಂಡಿದ್ದಾರೆ.
PublicNext
22/07/2022 05:29 pm