ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಆಸ್ತಿ 10 ತಲೆಮಾರು ಉಂಡರು ಕರಗದು : ಟ್ವೀಟ್ ನಲ್ಲಿ ಬಿಜೆಪಿ ಗರಂ

ಬೆಂಗಳೂರು : ರಾಜಕೀಯದಲ್ಲಿ ಒಬ್ಬರ ಕಾಲು ಒಬ್ಬರು ಎಳೆಯುವುದು ಸಾಮಾನ್ಯ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಸ್ತಿ ವಿವರ ನೀಡಿರುವ ಬಿಜೆಪಿ 10 ತಲೆಮಾರು ಉಂಡು ಕರಗದಷ್ಟು ಆಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.ಸದ್ಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಸುಳ್ಳು ಹೇಳಲು ಸಾಧ್ಯವೇ? ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ?

ಕನಕಪುರದ ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಹೇಳಿದೆ.

ಸಚಿವರಾಗಿದ್ದ ಕೆಜೆ ಜಾರ್ಜ್ ಅವರ ಸ್ಟೀಲ್ ಬ್ರಿಡ್ಜ್ ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ! ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು ಎಂದು ಟ್ವೀಟ್ ಮಾಡಿದೆ.

Edited By : Nirmala Aralikatti
PublicNext

PublicNext

22/07/2022 03:35 pm

Cinque Terre

31.86 K

Cinque Terre

4

ಸಂಬಂಧಿತ ಸುದ್ದಿ