ಬಾಗಲಕೋಟೆ: ಕಾಂಗ್ರೆಸ್‌ನ ತಾಯಿ ಬಂಜೆ ಆಗಿದ್ದಾಳೆ. ಆಕೆ ಗರ್ಭಿಣಿ ಆಗಲ್ಲ. ಮಗುವನ್ನೂ ಹೆರೋದಿಲ್ಲ. ಹೀಗಾಗಿ ಕುಲಾಯಿ ಹೊಲಿಸುವ ಪ್ರಸಂಗವೂ ಇಲ್ಲ ಎಂದು ಮಾಜಿ ಡಿಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಮಖಂಡಿಯಲ್ಲಿ ಗುರುವಾರ ಮಾತನಾಡಿದ ಅವರು ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಎಂಬ ಮಾತಿದೆ. ಆದ್ರೆ ಈ ಮಾತನ್ನು ನಾನು ಒಪ್ಪೋದಿಲ್ಲ. ಕಾರಣ, ಕಾಂಗ್ರೆಸ್‌ನ ತಾಯಿ ಬಂಜೆ. ಗರ್ಭಿಣಿ ಆದರಲ್ಲವೇ ಕುಲಾಯಿ ಹೊಲಿಸೋದು? ಎಂದು ಸವದಿ ಕಾಂಗ್ರೆಸ್ ಮೇಲೆ ನಾಲಗೆ ಹರಿಬಿಟ್ಟಿದ್ದಾರೆ.
ಸವದಿ ನೀಡಿದ ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಹಾಗೂ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಸಿಎಂ ಆಗುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಖರ್ಗೆ ಅವರಿಗೆ ವಯಸ್ಸಾಗಿದೆ. ಅವರು ಸಿಎಂ ಆಗಿ ನಿವೃತ್ತಿ ಆಗಬೇಕೆಂದುಕೊಂಡಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಸಿಎಂ ಆಗಿದ್ದಾರೆ. ಒಮ್ಮೆ ಅಧಿಕಾರ ಅನುಭವಿಸಿದವರು ಮತ್ತೊಮ್ಮೆ ಸಿಎಂ ಅಗಬಾರದು ಎಂಬ ಮಾತು ಸ್ವಪಕ್ಷದಲ್ಲೇ ಇದೆ. ಹೀಗಿರುವಾಗ ಡಿ.ಕೆ ಶಿವಕುಮಾರ್ ಕೂಡ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಎರಡು ಡಜನ್ ಸಿಎಂ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಲಕ್ಷ್ಮಣ ಸವದಿ, ಕಾಂಗ್ರೆಸ್ ನಾಯಕರಿಗೆ ಕುಟುಕಿದ್ದಾರೆ.
PublicNext
22/07/2022 02:26 pm