ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಉದ್ಘಾಟಿಸಿದ ರಸ್ತೆ : ವಾರದಲ್ಲಿಯೇ ಹಾಳಾಯ್ತು

ಲಕ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 296 ಕಿಲೋಮೀಟರ್ ಉದ್ದದ ಬುಂದೇಲ್ ಖಂಡ ಎಕ್ಸ್ಪ್ರೆಸ್ ವೇಯನ್ನು ಶನಿವಾರ (ಜುಲೈ 16) ಲೋಕಾರ್ಪಣೆ ಮಾಡಿದ್ದಾರೆ. ಆದರೆ ಈ ರಸ್ತೆ ಉದ್ಘಾಟನೆಯಾದ ಕೇವಲ 6 ದಿನದಲ್ಲಿ ಕಿತ್ತು ಹೋಗಿದೆ. ಅತೀಯಾದ ಮಳೆಯಿಂದಾಗಿ ಸದ್ಯ ಈ ಬಹುಕೋಟಿ ವೆಚ್ಚದ ರಸ್ತೆ ಕಿತ್ತುಹೋಗಿರುವುದು

ಹೌದು ಬರೋಬ್ಬರಿ 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿಮೀ, ನಾಲ್ಕು-ಪಥದ ಎಕ್ಸ್ ಪ್ರೆಸ್ ವೇಯನ್ನು ನಿರ್ಮಿಸಲಾಗಿದೆ. ಈ ಎಕ್ಸ್ ಪ್ರೆಸ್ ವೇಯನ್ನು ಆರು ಪಥಗಳಿಗೆ ವಿಸ್ತರಣೆ ಮಾಡುವ ಅವಕಾಶವೂ ಇದೆ. ಇದು ಚಿತ್ರಕೂಟ್ ಜಿಲ್ಲೆಯ ಭರತ್ ಕೂಪ್ ಬಳಿಯ ಗೊಂಡಾ ಹಳ್ಳಿಯಲ್ಲಿ NH-35 ನಿಂದ ವಿಸ್ತರಣೆಯಾಗಲಿದ್ದು, ಇಟಾವಾ ಜಿಲ್ಲೆಯ ಕುದುರೆಲ್ ಗ್ರಾಮದಲ್ಲಿ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇಯೊಂದಿಗೆ ವಿಲೀನಗೊಳ್ಳುತ್ತದೆ.

ಚಿತ್ರಕೂಟ, ಬಂದಾ, ಮಹೋಬ, ಹಮೀರ್ಪುರ್, ಜಲೌನ್, ಔರೈಯಾ ಮತ್ತು ಇಟಾವಾ ಸೇರಿದಂತೆ 7 ಜಿಲ್ಲೆಗಳ ನಡುವೆ ಈ ಎಕ್ಸ್ ಪ್ರೆಸ್ ವೇ ಹಾದು ಹೋಗಲಿದೆ.

Edited By : Nirmala Aralikatti
PublicNext

PublicNext

22/07/2022 09:54 am

Cinque Terre

94.22 K

Cinque Terre

33

ಸಂಬಂಧಿತ ಸುದ್ದಿ