ಬೆಂಗಳೂರು: ನಾನು ಜೈಲಿಗೆ ಹೋಗಿ ಬಂದು ಬರೋಬ್ಬರಿ 3 ವರ್ಷಗಳೇ ಕಳೆದಿವೆ. ಆದರೂ ಈಗಲೂ ಲವ್ ಲೆಟರ್ ಬರ್ತಾನೇ ಇವೆ. ಇಡಿ ಮತ್ತು ಐಟಿ ಅವರಿಗೆ ನನ್ನ ಒಂದು ವರ್ಷ ಬಿಟ್ಟು ಬಿಡ್ರಪ್ಪ ಅಂತ ಪತ್ರ ಬರೆದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿಯೇ ಕಾಂಗ್ರೆಸ್ ಪಕ್ಷ ಇಂದು ಬೃಹತ್ ಪ್ರತಿಭಟನೆ ಮಾಡಲಾಗಿದೆ. ಈ ಪ್ರತಿಭಟನೆಯನ್ನ ಉದ್ದೇಶಿಸಿಯೇ ಡಿಕೆಶಿ ಮಾತನಾಡಿದರು.
ನೀವೆಲ್ಲರೂ ಕಾಂಗ್ರೆಸ್ ಕುಟುಂಬದ ಮಕ್ಕಳು.ಇಡಿ ಬಗ್ಗೆ ಸ್ವಲ್ಪ ನನಗೆ ಅನುಭವ ಇದೆ.ತಿಹಾರ್ ಜೈಲು,ಐಟಿ,ಸಿಬಿಐ ಬಗ್ಗೆ ನನಗೆ ಅನುಭವ ಇದೆ ಎಂದು ಡಿಕೆಶಿ ಹೇಳಿದ್ದಾರೆ.
ಇಡಿ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರನ್ನ 50 ಗಂಟೆ ಕೂರಿಸಿದ್ದರಂತೆ.ಆಗ ರಾಹುಲ್ ಗಾಂಧಿ ಅವರನ್ನ ಇಷ್ಟು ಗಂಟೆ ಕೂತೀದ್ದೀರಾ ಸುಮ್ಮನೆ ಅಂತ ಕೇಳಿದ್ರಂತೆ .ರಾಹುಲ್ ಹೇಳಿದ್ರಂತೆ,ನಾನೊಬ್ಬನೇ ಕುಳಿತಿಲ್ಲ.ಇಡೀ ದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕುಳಿತಿದ್ದಾರೆ ಎಂದು ಹೇಳಿದ್ದರಂತೆ ಎಂದು ಡಿಕೆಶಿ ಇದೇ ವೇಳೆ ಹೇಳಿದರು.
PublicNext
21/07/2022 06:28 pm