ಬೆಂಗಳೂರು: ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಬೆಂಗಳೂರಿನಲ್ಲಿ ಪ್ರೋಟೆಸ್ಟ್ ನಡೆಸಿದೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಮೇಲಿಂದ ಪೊಲೀಸ್‌ರ ಮೇಲೆ ಜಂಪ್ ಮಾಡಿಯೇ ಬಿಟ್ಟರು.
ಹೌದು.ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ರತಿಭಟನಾಕಾರರು ಮುಂದಾದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರ ಬಂಧನ ಕೂಡ ಆಯಿತು.
ಇದೇ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಶಾಂತಿನಗರದಲ್ಲಿರೋ ಇಡಿ ಕಚೇರಿ ಬಳಿಕ ಎರಡು ಕಾರ್‌ಗಳಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ಬೆಂಕಿ ಹೆಚ್ಚಿದ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬ್ಯಾರಿಕೇಡ್ ಮೇಲೆ ಹತ್ತಿ ಘೋರವಾಗಿಯೇ ಪ್ರತಿಭಟನೆ ಮಾಡಿದರು. ಅಲ್ಲಿಂದಲೇ ಪೊಲೀಸರ ಮೇಲೆ ಜಂಪ್ ಕೂಡ ಮಾಡಿದರು. ಆ ಕೂಡಲೇ ಪೊಲೀಸರು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನ ಬಂಧಿಸಿದರು.
PublicNext
21/07/2022 04:41 pm