ದಾವಣಗೆರೆ: ರಾಜ್ಯದಲ್ಲಿ ಮದರಸ ಶಿಕ್ಷಣವನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಮುತಾಲಿಕ್, ಕುರಾನ್ ಬೇಕಾದ್ರೆ ಮನೆಯಲ್ಲಿ ಕಲಿಸಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಇನ್ನುಳಿದ ಶಿಕ್ಷಣವನ್ನು ಉರ್ದು ಶಾಲೆಯಲ್ಲಿ ಪಠ್ಯ ಪುಸ್ತಕ ಮೂಲಕ ಓದಲಿ. ಆದ್ರೆ, ಈಗ ಮದರಸಗಳು ಭಯೋತ್ಪಾದಕರನ್ನು ತಯಾರು ಮಾಡುವ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.
ಪಾಕಿಸ್ತಾನದಲ್ಲೇ ಮದರಸಗಳನ್ನು ಬ್ಯಾನ್ ಮಾಡಿದ್ದಾರೆ. ನಾನಾ ಇಸ್ಲಾಂ ದೇಶದಲ್ಲೇ ನಿಷೇಧಿಸಿದ್ದಾರೆ. ಇಲ್ಲಿ ನೂರಕ್ಕೆ ನೂರರಷ್ಟು ನಿಷೇಧ ಮಾಡಬೇಕು. ಭಾರತದ ಪಠ್ಯ ಪುಸ್ತಕ ಓದಿ ಉತ್ತಮ ಭಾರತೀಯ ನಾಗರಿಕರಾಗಲಿ. ಅದನ್ನು ಬಿಟ್ಟು ಪಾಕಿಸ್ತಾನಿ, ತಾಲಿಬಾನ್ ಗಳಾಗಬಾರದು. ನೋಂದಣಿ ಆಗದಿರುವ ಮದರಸಗಳೂ ಇವೆ. ಇವುಗಳನ್ನು ನಿಲ್ಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು. "ನೋಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ" ಎನ್ನುವುದರ ಬದಲು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
PublicNext
20/07/2022 09:26 pm