ದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದು ದೆಹಲಿಯ ತಮ್ಮ ಕಚೇರಿಯಿಂದಲೇ ಧಾರವಾಡ ಜಿಲ್ಲಾಡಳಿತದೊಂದಿಗೆ Virtuval ಸಭೆ ನಡೆಸಿದರು. ಮಳೆ ಹಾನಿ, ಶಾಲೆ ಕೊಠಡಿಗಳ ಮರು ನಿರ್ಮಾಣ,ಹೀಗೆ ವಿವಿಧ ವಿಷಯಗಳ ಮತ್ತು ಯೋಜನೆ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು Virtuval ಮೀಟಿಂಗ್ ನಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಆದ ಮಳೆ ಹಾನಿ ಮತ್ತು ಅದಕ್ಕೆ ಸದ್ಯ ತೆಗೆದುಕೊಳ್ಳಬೇಕಿರೋ ಕ್ರಮದ ಕುರಿತು ಚರ್ಚೆ ಮಾಡಿದರು. ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿಯೇ "ಹರ್ ಘರ್ ತಿರಂಗಾ ಯೋಜನೆ" ಪರಿಣಾಮ ಅನುಷ್ಠಾದ ಕುರಿತು ಚರ್ಚೆ ನಡೆಸಿದರು.
ಅಮೃತ ಸರೋವರ್-75 ಯೋಜನೆ 11 ಅಡಿ ನಾಲ್ಕು ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಆಗಸ್ಟ್-15ರ ಒಳಗೆ ಕೆರೆ ಕಾಮಗಾರಿ ಪೂರ್ಣಗೊಳಿಸೋ ವಿಷಯವೂ ಇಲ್ಲಿ ಚರ್ಚಿಸಲಾಗಿದ್ದು, ಹೀಗೆ ಧಾರವಾಡ ಜಿಲ್ಲಾಡಳಿತದ ಈ Virtuval ಮೀಟಿಂಗ್ ನಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ್ ಆರ್.ಧಾರವಾಡ, ಜಿಲ್ಲಾಧಿಕಾರಿ ಗುರುದತ್ ಹೆಗಡೆ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಸುರೇಶ್ ಇಟ್ನಾಳ್, ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ ಹಾಗೂ ಇತರರು ಈ ಸಭೆಯಲ್ಲಿ ಭಾಗಿ ಆಗಿದ್ದರು.
PublicNext
20/07/2022 09:14 pm