ಗದಗ: ತ್ಯಾಗ ಬಲಿದಾನದಕ್ಕೆ ಮತ್ತೊಂದು ಹೆಸರೇ ಬಿಜೆಪಿ ಪಕ್ಷ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪಕುಮಾರ ಕೆ.ಸಿ ಹೇಳಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಕಾರ್ಯಕಾರಣಿ ಉದ್ಘಾಟನೆ ಮಾಡಿ ಮಾತನಾಡುತ್ತ ಯುವ ಮೋರ್ಚಾದ ಕಾರ್ಯವೈಖರಿ, ಅವಲೋಕನ ನಡೆಸುವುದೇ ಕಾರ್ಯಕಾರಣಿ ಉದ್ದೇಶ ವಾಗಿದ್ದು ಯುವಕರ ನೇತೃತ್ವವನ್ನು ಯುವಕರೆ ರಾಷ್ಟ್ರಸೇವೆಯಲ್ಲಿ ತೊಡಗಿಸುವ ಪಕ್ಷ ಇದೆ ಅಂದ್ರೆ ಅದು ಬಿಜೆಪಿ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ನಾಯಕ ಸ್ಥಾನವನ್ನು ಕೊಡುತ್ತೆ ಯಾವುದೇ ತೋಳ್ಬಲ ಇಲ್ಲದೇ ಸಮಾಜದಲ್ಲಿ ತೊಡಗಿಸುವವರನ್ನು ಪಕ್ಷದಲ್ಲಿ ಸ್ಥಾನಮಾನ ಕೊಡುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವುದು ಬಿಜೆಪಿ ಉದ್ದೇಶವಾಗಿದೆ. ಕಾರ್ಯಕರ್ತರಿಗೆ ತಾಯಿ ಹೃದಯ ಇರಬೇಕು. ಕಿವಿ ಇಲ್ಲವರಿಗೆ ಕಿವಿಯಾಗಿ ಕಣ್ಣು ಇಲ್ಲದವರಿಗೆ ಕಣ್ಣು ಆಗಿ ಧ್ವನಿ ಇಲ್ಲದವರಿಗೆ ಧ್ವನಿ ಆಗುವುದೇ ಯುವ ಮೋರ್ಚದ ಕಾರ್ಯಕರ್ತರ ಕೆಲಸ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೊರೊನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆಸಿ ಯುವ ಮೋರ್ಚಾದಿಂದ ರಾಜ್ಯ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.
PublicNext
20/07/2022 04:03 pm