ಮೈಸೂರು: ರಾಜ್ಯದ ಮುಖ್ಯಮಂತ್ರಿಯಾಗುವ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣ ಎಂದೇನಿಲ್ಲ. ನಮ್ಮದು ಕಾಂಗ್ರೆಸ್ ಬಣ ಮಾತ್ರ. ಎಸ್.ಎಂ.ಕೃಷ್ಣರ ನಂತರ ಒಕ್ಕಲಿಗ ಸಮುದಾಯದಿಂದ ನನಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಹಂತ ತಲುಪಿದ್ದೇನೆ. ಹಾಗಾಗಿ ನನ್ನ ಕೈ ಬಲಪಡಿಸಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಜೊತೆಗೆ ರಾಜ್ಯದ ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ" ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ತಾನೇ ಪ್ರಮುಖ ಸ್ಪರ್ಧಾಳು ಎಂಬ ಸಂದೇಶ ನೀಡಿದ್ದಾರೆ.
ನಾನು ಸನ್ಯಾಸಿ ಅಲ, ಖಾವಿ ತೊಟ್ಟಿಲ್ಲ ನಾನು ಖಾದಿ ತೊಟ್ಟಿದ್ದೇನೆ. ಎಸ್.ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಅದನ್ನು ಮಿಸ್ ಮಾಡಿಕೊಳ್ಳಬೇಡಿ ಅಂತಾ ಸಮುದಾಯದವರಿಗೆ ಹೇಳಿದ್ದೇನೆ. ಸಮುದಾಯದವರು ನನ್ನ ಪರ ನಿಲ್ಲಲ್ಲಿ ಅಂತ ಅವರಿಗೆ ಮನದಟ್ಟು ಮಾಡಿದ್ದೇನೆ. ಸಿಎಂ ಆಗಬೇಕಾದರೆ ಸರ್ಕಾರ ಬರಬೇಕು. ಸಿಎಂ ಆಗುವುದು ಆಮೇಲೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನ್ನ ಬೆನ್ನಿಗೆ ಒಕ್ಕಲಿಗರು ಮಾತ್ರವಲ್ಲ ಎಲ್ಲಾ ಸಮಯದಾಯ ನಿಲ್ಲಲಿ ಎಂದರು.
ಒಬ್ಬ ಮಂತ್ರಿ ಲಂಚದಿಂದ ಹೋದ ಇನ್ನೊಬ್ಬ ಮಂಚದಿಂದ ಹೋದ. ಇಂತಹ ಹತ್ತಾರು ಹಗರಣ ನಡೆದಿವೆ. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು. ನಾನು ಎಂದಿಗೂ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವರೇ ಇದು ಭ್ರಷ್ಟ ಸರ್ಕಾರ ಎಂದು ಹೇಳಿದ್ದಾರೆ. ಅವರಿಗೆ ನೋಟೀಸ್ ಕೊಟ್ಟು ವಿವರಣೆ ಕೇಳಿ ಎಂದು ವಾಗ್ದಾಳಿ ನಡೆಸಿದರು.
PublicNext
19/07/2022 05:24 pm