ಬೆಳಗಾವಿ : ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾಮಚಂದ್ರರಾವ್ ಸೇರಿದಂತೆ ಮತ್ತಿಬ್ಬರ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಶ್ರೀಮಂತರ ಜತೆ ಸಲುಗೆ ಬೆಳೆಸಿ ವಿಡಿಯೋ ಚಿತ್ರೀಕರಿಸಿ ಹಣ ವಸೂಲಿ ಮಾಡಿ ಐಷಾರಾಮಿ ಜೀವನಕ್ಕೆ ಬಳಸಿಕೊಳ್ಳುತ್ತಿದ್ದಾಳೆ ಎಂದು ನವ್ಯಶ್ರೀ ವಿರುದ್ಧ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಸದ್ಯ ಈಕೆಯಿಂದ ಹಿಂಸೆ ಅನುಭವಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಅವರು ದೂರು ನೀಡಿದ್ದಾರೆ. ತಿಲಕ್ ರಾಜ್ ಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ-ಮಕ್ಕಳನ್ನು ತೊರೆದು ನವ್ಯಶ್ರೀ ಜತೆ ನಂಟು ಬೆಳೆಸಿಕೊಂಡ ಈತ, ಪತ್ರಕರ್ತನ ಸೋಗಿನಲ್ಲಿ ನವ್ಯಶ್ರೀಯನ್ನು ಮುಂದಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ.
ನವ್ಯಶ್ರೀ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಜೀವ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಅತ್ರಿಕ್ರಮ ಪ್ರವೇಶಿಸಿ ಹಣ ವಸೂಲಿ ಮಾಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಸೋಮವಾರ ತಡರಾತ್ರಿ ರಾಜಕುಮಾರ್ ಟಾಕಳೆ ದೂರು ನೀಡಿದ್ದಾರೆ.
‘2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದ್ವೆ ಆಗಿ ಮೂವರು ಮಕ್ಕಳಿದ್ದಾರೆ ಎಂಬುಗೆ ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗಿನ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ’ ಎಂದು ಸಂತ್ರಸ್ತ ದೂರಿನಲ್ಲಿ ವಿವರಿಸಿದ್ದಾರೆ.
PublicNext
19/07/2022 01:22 pm