ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರಪತಿ ಚುನಾವಣೆ: ಗಾಲಿ ಕುರ್ಚಿ ಮೇಲೆ ಬಂದು ಮತ ಹಾಕಿದ ದೇವೇಗೌಡ

ಬೆಂಗಳೂರು: ಗಾಲಿ ಕುರ್ಚಿ ಮೇಲೆ ಕುಳಿತು ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಅಶಕ್ತತೆ ಹಾಗೂ ಇತರ ವಯೋಸಹಜ ಕಾರಣಗಳಿಂದಾಗಿ ಅವರು ಗಾಲಿ ಕುರ್ಚಿ ಮೇಲೆ ಬಂದಿದ್ದಾರೆ.

ಅವರ ಜೊತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗೂ ಶಾಸಕರಾದ ಬಂಡೆಪ್ಪ ಕಾಶೆಂಪೂರ್, ಅನಿತಾ ಕುಮಾರಸ್ವಾಮಿ ಉಪಸ್ಥಿತರಿದ್ದರು. 94 ವರ್ಷದ ದೇವೇಗೌಡ ಅವರಿಗೆ ನಡೆದುಕೊಂಡು ಬರಲು ಸಾಧ್ಯವಾಗದ ಕಾರಣ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ಕಾರಿನಿಂದ ಇಳಿದ ಅವರು ನಂತರ ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತದಾನ ಮಾಡಿದರು. ಕಾಲು ನೋವಿನ ಕಾರಣದಂದಾಗಿ ವ್ಹೀಲ್ ಚೇರ್ ಬಳಕೆ ಮಾಡಿದರು.

Edited By : Nagaraj Tulugeri
PublicNext

PublicNext

18/07/2022 09:50 pm

Cinque Terre

70.43 K

Cinque Terre

2

ಸಂಬಂಧಿತ ಸುದ್ದಿ