ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಮುಂಗಾರು ಅಧಿವೇಶನ-ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ!

ನವದೆಹಲಿ: ಇಂದಿನಿಂದ ಮುಂಗಾರು ಅಧಿವೇಶ ಆರಂಭಗೊಳ್ಳುತ್ತಿದೆ. ಈ ಒಂದು ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ನಿಜಕ್ಕೂ ಅಗ್ನಿ ಪರೀಕ್ಷೆ ಕಾದಿದೆ. ಪ್ರತಿಪಕ್ಷಗಳ ಪ್ರಶ್ನೆಗಳ ದಾಳಿ ಮತ್ತು ಬೆಲೆ ಏರಿಕೆಯ ಬಿಸಿ ಇಡೀ ಅಧಿವೇಶನದಲ್ಲಿ ಗರಂ ಹವಾ ಸೃಷ್ಟಿ ಮಾಡಲಿದೆ.

ಹೌದು. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅಗ್ನಿಪಥ್ ಯೋಜನೆಯಿಂದ ಸೇನಾ ಆಕಾಂಕ್ಷಿಗಳು ರೊಚ್ಚಿಗೆದಿದ್ದಾರೆ. ಹಣದುಬ್ಬರ ಎಲ್ಲರ ಲೆಕ್ಕಾಚಾರ ಬದಲಿಸಿ ಬಿಟ್ಟಿದೆ.

ಈ ಹಿನ್ನೆಲೆಯಲ್ಲಿಯೇ ಸಂಸತ್ತಿನಲ್ಲಿ ಇಂದಿನಿಂದ (ಜುಲೈ-18) ರಿಂದ ಆಗಸ್ಟ್ 12 ರವರೆಗೂ ಈ ಅಧಿವೇಶನ ನಡೆಯಲಿದ್ದು, 25 ದಿನ ಅಧಿವೇಶನ ನಡೆಯಲಿದೆ. ಇದರಲ್ಲಿ ರಜಾ ದಿನ ಹೊರತುಪಡಿಸಿ 14 ದಿನ ಮಾತ್ರ ಕಲಾಪ ಇರುತ್ತದೆ. ಒಟ್ಟು ಈ 14 ದಿನಗಳಲ್ಲಿ 32 ಮಸೂದೆಗಳನ್ನ ಹಾಗೂ ವಿಪಕ್ಷಗಳ ಸವಾಲನ್ನ ಮೋದಿ ಸರ್ಕಾರ ಎದುರಿಸಲೇಬೇಕಿದೆ.

Edited By :
PublicNext

PublicNext

18/07/2022 10:17 am

Cinque Terre

40.12 K

Cinque Terre

0

ಸಂಬಂಧಿತ ಸುದ್ದಿ