ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಕ್ಕಳ ಜೊತೆ ಮಾಜಿ ಡಿಸಿಎಂ ಫುಲ್ ಖುಷ್.!

ಕೊರಟಗೆರೆ: ಏನಿದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹಲವು ಮಕ್ಕಳೊಂದಿಗೆ ಫೋಟೋ ತೆಗೆದುಕೊಂಡಿದ್ದಾರೆ ಎಂದು ತಲೆ ಕೆಡಿಸಿ ಕೊಂಡಿದ್ದೀರಾ? ಇದೇನು ಫೋಟೋಶೂಟ್ ಅಂತ ಕನ್ಫ್ಯೂಸ್ ಆಗುತ್ತಿದ್ದೀರಿ ಅಲ್ವಾ? ಇದು ಪರಮೇಶ್ವರ್ ಅವರಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರ ಮತ್ತು ಮುಖಂಡರ ಮಕ್ಕಳ ಮೇಲೆ ಬಂದಿರುವ ಪ್ರೀತಿ.

ಶನಿವಾರ ಅಭಿವೃದ್ಧಿ ಕಾಮಗಾರಿ ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಿಕ್ಕಂತಹ ಮಕ್ಕಳೊಂದಿಗೆ ಆತ್ಮೀಯವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈಗ ಪರಮೇಶ್ವರ್ ಮಕ್ಕಳ ಪ್ರೀತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಕೆಲವರು ಇದು ರಾಜಕೀಯ ಪ್ರೀತಿ ಎಂದರೂ ಸಹ ಪರಮೇಶ್ವರ್ ಕ್ಷೇತ್ರ ಪ್ರವಾಸದಲ್ಲಿ ಮಕ್ಕಳೊಂದಿಗೆ ಆತ್ಮೀಯವಾಗಿ ಒಡನಾಟದಲ್ಲಿ ಇದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ

Edited By : Vijay Kumar
PublicNext

PublicNext

17/07/2022 10:34 pm

Cinque Terre

23.8 K

Cinque Terre

0

ಸಂಬಂಧಿತ ಸುದ್ದಿ