ತುಮಕೂರು: ಜುಲೈ 31 ರಂದು ನಿವೃತ್ತರಾಗಲಿರುವ ಹಿರಿಯ ಐಎಎಸ್ ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಅನಿಲ್ ಕುಮಾರ್ ಬಿಹೆಚ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಇತ್ತೀಚಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನಿಲ್ ಕುಮಾರ್ ಸಾರ್ವಜನಿಕ ಸೇವೆಗೆ ನಿವೃತ್ತಿ ನಂತರ ಜನರು ಬಯಸಿದರೆ ಸಾರ್ವಜನಿಕ ಸೇವೆಗೆ ಬರುತ್ತೇನೆ. ಯಾವುದೇ ಪಕ್ಷವನ್ನು ನಾನು ಆಯ್ಕೆ ಮಾಡಿಕೊಂಡಿಲ್ಲ. ಸರ್ಕಾರಿ ಸೇವೆಯ ನಿವೃತ್ತಿ ಬಳಿಕ ಇದರ ಬಗ್ಗೆ ಚಿಂತಿಸುತ್ತೇನೆ ಎಂದು ಹೇಳಿರುವ ಮಾತುಗಳು ಸಖತ್ ವೈರಲ್ ಆಗಿತ್ತು. ಈಗ ನಿವೃತ್ತಿ ಸನಿಹವಾಗುತ್ತಿರುವಲೇ ಬಿಜೆಪಿ ಟಿಕೆಟ್ ಕನ್ಫರ್ಮ್ ಆಗುತ್ತಿದ್ದು, ಪರಮೇಶ್ವರ್ ಎದುರು ಅನಿಲ್ ಕುಮಾರ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಎಲ್ಲ ವಿಚಾರಕ್ಕೂ ತಾರ್ಕಿಕ ಅಂತ್ಯ ಸಿಗಲಿದೆ.
PublicNext
17/07/2022 10:25 pm