ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ಫೋಟೋ ಮತ್ತು ವೀಡಿಯೋ ಮಾಡುವಂತಿಲ್ಲ ಎಂದು ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ರಾತ್ರೋ ರಾತ್ರಿನೇ ಅದನ್ನ ಸರ್ಕಾರ ಹಿಂಪಡೆದು ಆದೇಶ ಹೊರಡಿಸಿತ್ತು.
ಆದರೆ, ಎರಡನೇ ಬಾರಿ ಹೊರಡಿಸಿದ್ದ ಆದೇಶದಲ್ಲಿ ಭಾರಿ ತಪ್ಪುಗಳೇ ಇದ್ದವು. ಅದಕ್ಕೇನೆ ಆ ಆದೇಶ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸರ್ಕಾರದ ಈ ಆದೇಶ ಪ್ರತಿಯಲ್ಲಿ 3-4 ವಾಕ್ಯಗಳಲ್ಲಿ ವಿಪರೀತ ತಪ್ಪುಗಳೇ ಇದ್ದವು. ನಡಾವಳಿಯು ನಡವಳಿ ಅಂತ ತಪ್ಪಿತ್ತು.ಪ್ರಸ್ತಾವನೆ ಎನ್ನುವ ಬದಲು ಪ್ರಸತ್ತಾವನೆ ಅಂತಲೇ ಇತ್ತು. ಮೇಲೆ ಬದಲು ಮೇಲೇ ಅಂತಲೆ ಆಗಿತ್ತು.
ಹೀಗೆ ಹಲವು ತಪ್ಪುಗಳ ಈ ಆದೇಶ ಪ್ರತಿಯನ್ನ ಸರಿ ಪಡಿಸಿಲು ಸರ್ಕಾರ ತಿದ್ದು ಪಡಿ ಆದೇಶ ಹೊರಡಿಸಿದ್ದು,ಈಗ ಆದೇಶ ಪ್ರತಿ ಸರಿಪಡಿಸಲಾಗಿದೆ.
PublicNext
17/07/2022 11:01 am