ಬೆಂಗಳೂರು: ರಾಜ್ಯದ ಕಾರಾಗೃಹದಲ್ಲಿರೊ ಕೈದಿಗಳ ದಿನಗೂಲಿಯನ್ನ 200 ರೂ. ರಿಂದ 525 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸದ್ಯಕ್ಕೆ ಕೈದಿಗಳಿಗೆ 200 ರೂ. ದಿನಗೂಲಿ ನೀಡಲಾಗುತ್ತಿದೆ. ಆದರೆ,ಈಗ ಕಾರ್ಮಿಕ ಇಲಾಕೆ ನಿಗದಿಪಡಿಸಿರೋ ಕನಿಷ್ಟ ಕೂಲಿ 525 ರೂ. ಕೊಡಲ ನಿರ್ಧರಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈದಿಗಳಿಗೆ ಕನಿಷ್ಟ ಕೂಲಿ ನೀಡಲು ಸರ್ಕಾರ 7 ಕೋಟಿ ವಿಶೇಷ ಅನುದಾನ ಮೀಸಲಿಡಲು ನಿರ್ಧರಿಸಿದೆ ಎಂದು ಕೂಡ ಸಚಿವ ಆರಗ ಜ್ಞಾನೇಂದ್ರ ವಿವರಿಸಿದರು.
PublicNext
17/07/2022 07:48 am