ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ರೆಸಾರ್ಟ್ ರಾಜಕಾರಣ ಗ್ರಾ.ಪಂ.ಗೂ ಪ್ರವೇಶ!; ಕುಂದೂರಲ್ಲಿ"ಮಹಾ" ಬೆಳವಣಿಗೆ

ಹಾವೇರಿ: ರೆಸಾರ್ಟ್ ರಾಜಕಾರಣ ಗ್ರಾಮ ಪಂಚಾಯಿತಿಗೂ ಕಾಲಿಟ್ಟಿದ್ದು, ಅಧ್ಯಕ್ಷರನ್ನು ಕುರ್ಚಿಯಿಂದ ಕೆಳಗಿಳಿಸಲು ಸಿನಿಮೀಯ ರೀತಿಯ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಒಂದು ಬಣದ ಗ್ರಾಪಂ ಸದಸ್ಯರು ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿ ಅವಿಶ್ವಾಸ ಪಂಚಾಯಿತಿಗೆ ಗೊತ್ತುವಳಿ ಪರ ಮತ ಚಲಾಯಿಸಿದರು. ಬೆಳಗ್ಗೆ 10ಕ್ಕೆ ಗ್ರಾಮ ಪಂಚಾಯಿತಿಗೆ ಆಗಮಿಸಿದ ಸದಸ್ಯರ ಗುಂಪೊಂದು ನೇರವಾಗಿ ಅವಿಶ್ವಾಸ ಮಂಡನೆ ಸಭೆಗೆ ಹಾಜರಾಗಿ ಹಾಲಿ ಗ್ರಾಪಂ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದರು.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ರೆಸಾರ್ಟ್ ರಾಜಕಾರಣವನ್ನು ಟಿ.ವಿ.ಗಳಲ್ಲಿ ಮಾತ್ರ ನೋಡಿದ್ದ ಗ್ರಾಮಸ್ಥರಿಗೆ ಅಂಥದ್ದೇ ದೃಶ್ಯ ಈಗ ತಮ್ಮೂರಲ್ಲಿ ಕಂಡು ಬೆರಗಾದರು. ಕುಂದೂರ ಪಂಚಾಯಿತಿಗೆ ಒಟ್ಟು 10 ಸದಸ್ಯ ಬಲ ಹೊಂದಿರುವ ಗ್ರಾಮ ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಾಗ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ತಲಾ 10 ತಿಂಗಳಿಗೆ ಒಬ್ಬರಂತೆ ಸದಸ್ಯರು ನಿರ್ಧರಿಸಿದ್ದರು. ಅದರಂತೆ ಅವಿಶ್ವಾಸ ಮಂಡನೆ ಸಭೆಯಲ್ಲಿ 10 ಸದಸ್ಯರ ಪೈಕಿ 7 ಸದಸ್ಯರು ಅವಿಶ್ವಾಸದ ಪರ ಹಾಗೂ ವಿರುದ್ಧ 3 ಸದಸ್ಯರು ಹಕ್ಕು ಚಲಾಯಿಸಿದರು.

Edited By :
PublicNext

PublicNext

15/07/2022 08:34 pm

Cinque Terre

75.75 K

Cinque Terre

0

ಸಂಬಂಧಿತ ಸುದ್ದಿ