ಹೊಸಪೇಟೆ: ಬಿಜೆಪಿಯನ್ನ ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಕ್ಕೆ ನನಗೆ ಈಗ ಪಶ್ಚಾತ್ತಾಪ ಆಗುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವ್ರು, ಬಿಜೆಪಿ ಪಕ್ಷ ಹಿಂದೂಗಳ ಪಕ್ಷ. ಈ ಒಂದು ನಂಬಿಕೆ ಮೇಲೆನೆ ಹಿಂದೂಗಳೂ ಅಧಿಕಾರಕ್ಕೆ ತಂದಿದ್ದಾರೆ.
ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂಗಳಿಗೆ ಅನ್ಯಾಯ ಆಗುತ್ತಿದ್ದರೂ ಸ್ಪಂದಿಸುತ್ತಲೇ ಇಲ್ಲ ಎಂದು ಮುತಾಲಿಕ್ ದೂರಿದರು.
ಶಿವಮೊಗ್ಗದಲ್ಲಿ ಹಿಂದೂ ಯುವಕ ಹರ್ಷ ಹತ್ಯೆಯಾಗಿ ಹಲವು ದಿನಗಳೇ ಕಳೆದಿವೆ.
ಆರೋಪಿಗಳ ಬಂಧನವೂ ಆಗಿದೆ. ಆದರೆ, ಅವರಿಗೆ ಬಿರಿಯಾನಿ ಕೊಟ್ಟು ಸಾಕಲಾಗುತ್ತಿದೆ.ರಾಜ್ಯ ಬಿಜೆಪಿ ಸರ್ಕಾರ ಏನು ಕತ್ತೆ ಕಾಯುತ್ತಿದಿಯಾ? ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
PublicNext
15/07/2022 01:17 pm