ಮುಂಬೈ: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಅವರಿಗೆ ಶಿವಸೇನಾ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಹೀಗಾಗಿ ಅವರಿಗೆ ಬೆಂಬಲ ನೀಡಬೇಕು ಎಂದು ಶಿವಸೇನಾದ 22 ಸಂಸದ ಪೈಕಿ 16 ಸಂಸದರಿಂದ ಕೇಳಿಬಂದ ಒತ್ತಾಯದ ಮೇರೆಗೆ ಠಾಕ್ರೆ ಈ ಘೋಷಣೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ನನ್ನ ಪಕ್ಷದ ಬುಡಕಟ್ಟು ನಾಯಕರು ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಗೆ ಅಧ್ಯಕ್ಷರಾಗಲು ಅವಕಾಶವಿದೆ ಎಂದು ನನಗೆ ಹೇಳಿದರು. ಬೆಂಬಲ ನೀಡುವ ವಿಚಾರವಾಗಿ ಸೇನಾ ಸಂಸದರ ಸಭೆಯಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಾಸ್ತವವಾಗಿ ಈಗಿನ ರಾಜಕೀಯ ವಾತಾವರಣದ ಪ್ರಕಾರ, ನಾನು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬಾರದು. ಆದರೆ ನಾವು ಸಂಕುಚಿತ ಮನೋಭಾವದವರಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
PublicNext
12/07/2022 09:16 pm