ನವದೆಹಲಿ: "ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ಪರ್ಡಿವಾಲ ನಿಮಗೆ ಸೆಲ್ಯೂಟ್. ಇದೇ ಉತ್ಸಾಹವನ್ನು ಉಳಿಸಿ ಮತ್ತು ಭಾರತವನ್ನು ರಕ್ಷಿಸಿ. ನ್ಯಾಯಾಂಗವೇ ದೇಶವನ್ನು ಈ ದೇಶದ್ರೋಹಿಗಳು, ರಾಕ್ಷಸರು ಮತ್ತು ಸರ್ವಾಧಿಕಾರಿಗಳಿಂದ ರಕ್ಷಿಸಬೇಕು" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಇ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮ ಕುರಿತು ಸುಪ್ರೀಂ ಕೋರ್ಟ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಕ್ಕೆ ಇಬ್ಬರು ನ್ಯಾಯಾಧೀಶರನ್ನು ಅವರು ಶ್ಲಾಘಿಸಿದರು.
ನರೇಂದ್ರ ಮೋದಿ ಸರಕಾರ ಹೋಗಬೇಕು ಮತ್ತು ಬಿಜೆಪಿಯೇತರ ಸರಕಾರ ಬರಬೇಕು. ಇಂದಿರಾ ಗಾಂಧಿಗೆ ಧನ್ಯವಾದಗಳು, ತುರ್ತುಪರಿಸ್ಥಿತಿಯನ್ನು ಹೇರುವ ಧೈರ್ಯವನ್ನು ಅವರು ತೋರಿದ್ದರು. ಅದು ನೇರ ಘೋಷಿತ ತುರ್ತುಪರಿಸ್ಥಿತಿಯಾಗಿತ್ತು. ಆದರೆ ಇಂದು ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದೆ ಎಂದು ದೂರಿದರು.
ಕುಸಿಯುತ್ತಿರುವ ರೂಪಾಯಿ ಮೌಲ್ಯ ಕುರಿತು ಹಿಂದೆ ಗುಜರಾತ್ ಸಿಎಂ ಆಗಿದ್ದ ಮೋದಿ ಆಡಿದ ಮಾತುಗಳ ವೀಡಿಯೋ ಪ್ರದರ್ಶಿಸಿದ ರಾವ್, "ಈಗ ರೂಪಾಯಿ ಮೌಲ್ಯ ಡಾಲರ್ ಎದುರು ರೂ 80 ತಲುಪಲಿದೆ. ನೀವೇಕೆ ಉತ್ತರಿಸುತ್ತಿಲ್ಲ. ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ" ಎಂದು ಅವರು ಹೇಳಿದರು.
PublicNext
11/07/2022 04:19 pm