ಕೋಲ್ಕತ್ತಾ: ಶ್ರೀಲಂಕಾ ದೇಶದ ಅಧ್ಯಕ್ಷರಿಗೆ ಬಂದ ದುಸ್ಥಿತಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬರಲಿದೆ ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಇದ್ರಿಸ್ ಅಲಿ ಹೇಳಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸರಕಾರದ ಜನವಿರೋಧಿ ಆಡಳಿತದ ವಿರುದ್ಧ ಶ್ರೀಲಂಕಾ ಜನ ದಂಗೆ ಎದ್ದಿದ್ದಾರೆ. ಅಲ್ಲಿನ ಅಧ್ಯಕ್ಷರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆದಿದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲೂ ಮುಂದೊಂದು ದಿನ ಇದೇ ಸ್ಥಿತಿ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಜನ ವ್ಯಾಪಕ ಪ್ರತಿಭಟನೆ ಮಾಡಲಿದ್ದಾರೆ. ಜನವಿರೋಧಿ ನೀತಿ ಹಾಗೂ ವೈಫಲ್ಯಗಳ ವಿರುದ್ಧ ಶ್ರೀಲಂಕಾಗಿಂತಲೂ ದೊಡ್ಡ ಪ್ರಮಾಣದಲ್ಲಿ ದಂಗೆ ಏಳಲಿದ್ದಾರೆ. ಆಗ ಪ್ರಧಾನಿ ಮೋದಿ ಕೂಡ ರಾಜೀನಾಮೆ ನೀಡಿ ಪಲಾಯನವಾಗಲಿದ್ದಾರೆ ಎಂದು ಇದ್ರಿಸ್ ಅಲಿ ಹೇಳಿದ್ದಾರೆ.
PublicNext
11/07/2022 11:07 am