ನವದೆಹಲಿ:ಬಾಟ್ಲಾ ಶೂಟೌಟ್ ನಲ್ಲಿ ಉಗ್ರ ಸತ್ತಾಗ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರಂತೆ.ಹೀಗೆ ಹೇಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಾಟ್ಲಾ ಶೂಟೌಟ್ ಪ್ರಕರಣವನ್ನ ಈಗ ಮತ್ತೆ ಕೆದುಕಿದ್ದಾರೆ.
ಉಗ್ರ ತಾಲೀಬ್ ಹುಸೇನ್ ಈ ಹಿಂದೆ ಜಮ್ಮು ವಿಭಾಗದ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಸೋಷಿಯಲ್ ಮೀಡಿಯಾ ಘಟಕದ ಮುಖ್ಯಸ್ಥನಾಗಿಯ ಕೆಲಸ ಮಾಡಿದ್ದಾನೆ. ಇದನ್ನ ತಿಳಿದ ಕೈ ನಾಯಕರು ಬಿಜೆಪಿಯಲ್ಲೂ ಭಯೋತ್ಪಾಕದರಿದ್ದಾರೆಂದು ಟೀಕಿಸ್ತಿದ್ದಾರೆ.
ಕನ್ಹಯಾ ಲಾಲ್ ಹತ್ಯೆ ಆರೋಪಿ ಬಿಜೆಪಿ ನಾಯಕರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾನೆ. ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ವಿಪಕ್ಷಗಳು ಬಿಜೆಪಿಯನ್ನ ಟೀಕಿಸಿದ್ದವು.
ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನೇರವಾಗಿಯೇ ಸೋನಿಯಾ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಅವರು ಹೆಸರಿಗೆ ಮಾತ್ರ ಇದ್ದರು.
ಆದರೆ, ಸೋನಿಯಾನೇ ಎಲ್ಲವನ್ನೂ ನಡೆಸಿದ್ದರು. ಇದೇ ಸಮಯದಲ್ಲಿಯೇ ಬಾಟ್ಲಾ ಹೌಸ್‌ನಲ್ಲಿ ಭಯೋತ್ಪಾದಕರ ಮೇಲೆ ಶೂಟೌಟ್ ಆಗಿತ್ತು. ಇದರಲ್ಲಿ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದನು. ಆಗ ಸೋನಿಯಾ ಕಣ್ಣೀರು ಹಾಕಿದ್ರಂತೆ ಎಂದು ಜೋಶಿ ಟೀಕಿಸಿದ್ದಾರೆ.
ಇಷ್ಟೇ ಅಲ್ಲ, ರಾಹುಲ್ ಗಾಂಧಿ ಅಂತೂ ಅಫ್ಜಲ್ ಗುರು ಜೊತೆಗೆ ಫೋಟೋ ತೆಗೆಸಿಕೊಂಡದ್ದರು. ಇಂತವರು ಬಿಜೆಪಿ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಜೋಶಿ ಚುಚ್ಚಿದರು.
PublicNext
11/07/2022 09:14 am