ಗೋವಾ: ಮಹಾರಾಷ್ಟ್ರದಲ್ಲಿ ಬೀಸಿದಂತೇನೆ ಈಗ ಗೋವಾ ರಾಜಕೀಯದಲ್ಲೂ ಬಂಡಾಯದ ಗಾಳಿ ಬೀಸೋ ಮುನ್ಸೂಚನೆ ಸಿಕ್ಕಿದೆ.
ಹೌದು. ಗೋವಾ ಕಾಂಗ್ರೆಸ್ ಗೆ ಈಗಾಗಲೇ ಬಂಡಾಯದ ಬಿಸಿ ತಟ್ಟಿ ಆಗಿದೆ. ಇಲ್ಲಿಯ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕರ ಸಂಪರ್ಕದಲ್ಲಿಯೇ ಇದ್ದಾರೆಂಬ ಆರೋಪ ಕೂಡ ಕೇಳಿ ಬರ್ತಿದೆ.
ಕಾಂಗ್ರೆಸ್ ಪಕ್ಷದ ಮೊನ್ನೆ ಶನಿವಾರ ತನ್ನ ಶಾಸಕರ ಸಭೆ ನಡೆಸಿದೆ.ಈ ಸಭೆಗೆ 11 ಜನ ಕಾಂಗ್ರೆಸ್ ಶಾಸಕರಲ್ಲಿ 7 ಜನ ಗೈರಾಗಿದ್ದರು. ಸಿಎಂ ಅಭ್ಯರ್ಥಿ ದಿಗಂಬರ್ ಕಾಮತ್ ಕೂಡ ಗೈರ್ ಆಗಿದ್ದರು. ಶಾಸಕರ ಜೊತೆಗೆ ಸಭೆ ನಡೆಸಿದ ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡುರಾವ್ ಬಂಡಾಯದ ಬಗ್ಗೆ ದೃಢಪಡಿಸಿದ್ದಾರೆ.
PublicNext
11/07/2022 08:39 am