ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಅದೆಷ್ಟು ಅಂದ್ರೆ, ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮನೆಗೆ ನುಗ್ಗಿ ಅಲ್ಲಿಯೇ ವಾಸ ಕೂಡ ಮಾಡ್ತಿದ್ದಾರೆ.
ಹೌದು.ಶ್ರೀಲಂಕಾದ ಜನ ಈಗ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಲ್ಲಿಯೇ ಸುತ್ತಾಡಿ ಇಲ್ಲಿಯೇ ಇದ್ದು ಬಿಟ್ಟಿದ್ದಾರೆ. ಊಟ,ಜಿಮ್ ಹೀಗೆ ಎಲ್ಲವೂ ಇಲ್ಲಿಯೇ ನಡೆಯುತ್ತಿದೆ.
ಅಪಾರ ಪ್ರಮಾಣದಲ್ಲಿಯೇ ಅಧ್ಯಕ್ಷರ ಮನೆಯತ್ತ ಜನ ನುಗ್ಗಿ ಬರುತ್ತಿದ್ದು, ಮೋಜಿ-ಮಸ್ತಿ, ಸೆಲ್ಫಿ ಸುತ್ತಾಟ ಹೀಗೆ ಜನ ಇಲ್ಲಿ ಮಸ್ತಿ ಮಾಡ್ತಿದ್ದಾರೆ. ಈಗ ನಾವು ಭ್ರಷ್ಟಾಚಾರ ಮುಕ್ತವಾಗಿದ್ದೇವೆ. ಇದು ಶಾಂತಯುತವಾಗಿಯೇ ಇದೆ. ಕುಟುಂಬ ಮತ್ತು ಮಕ್ಕಳೊಂದಿಗೆ ಇಲ್ಲಿ ಎಂಜಾಯ್ ಮಾಡ್ತಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ.
PublicNext
11/07/2022 07:46 am